ಮಯೂರ ಜಂಕ್ಷನ್ ರಾಜಕಾಲುವೆ ‌ನಿರ್ಮಾಣದಲ್ಲಿ ಲೋಪ: ಬಿಲ್ ಸ್ಥಗಿತಕ್ಕೆ ಪುಡಾ ಅಧ್ಯಕ್ಷರಿಂದ ‌ಸೂಚನೆ

ಪುತ್ತೂರು: ಮಯೂರ ಜಂಕ್ಷನ್ ಸಮೀಪದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಾಜಕಾಲುವೆ ‌ಡ್ರೈನೇಜ್ ಮತ್ತು ಸ್ಲಾಬ್ ‌ಕಾಮಗಾರಿಯಲ್ಲಿ ಅಕ್ರಮದ ವಾಸನೆ ಬಡಿದಿದ್ದು, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಭಟ್ ಅವರಿಗೆ ತಕ್ಷಣವೇ ಈ ಕೆಲಸದ ಬಿಲ್ ಸ್ಥಗಿತ ಮಾಡುವಂತೆ ನಗರಸಭೆಗೆ ಸೂಚಿಸಲಾಗಿದೆ.

ಆರಂಭದಿಂದಲೂ ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ರಾಮಚಂದ್ರ ಅವರು ನಿರಂತರ ಪರಿಶೀಲನೆ ನಡೆಸುತ್ತಿದ್ದರು. ಕಾಮಗಾರಿ ಒಂದು ನಡೆಸುವ ವಾರದ ಮೊದಲು, ಕಬ್ಬಿಣದ ಸರಳುಗಳನ್ನು ಸರಿಯಾಗಿ ಕಟ್ಟಿರುವುದು ಮತ್ತು ಹಲಿಗೆಗಳ ನಡುವಿನ ಸೀಳುಗಳನ್ನು ಕಾಗದ ರಟ್ಟಿನಲ್ಲಿ ಮುಚ್ಚಿರುವುದು ಒಳಗೊಂಡಿತ್ತು. ಇದನ್ನು ಗಮನಿಸಿ, ಅಮಲ ರಾಮಚಂದ್ರ ಭಟ್ ಅವರು ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್‌ಗೆ ಲೋಪದೋಷಗಳನ್ನು ಸರಿಪಡಿಸುವಂತೆ ಸೂಚಿಸಿದ್ದರು. ಜೊತೆಗೆ, ಹಾಕುವ ಮರದ ಹಲಗೆಗಳ ಮೇಲೆ ಪ್ಲಾಸ್ಟಿಕ್ ಶೀಟ್ ಅಳವಡಿಸುವಂತೆ ತಾಕೀತು ಮಾಡಲಾಗಿದೆ. ಗ್ಯಾಪ್‌ಗಳಲ್ಲಿ ಸಿಮೆಂಟ್ ಸೋರಿಕೆಯಾದರೆ ಕಾಮಗಾರಿ ಕಳಪೆಯಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಆದರೆ ಅವರು ನೀಡಿದ ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಪೂರ್ಣಗೊಳಿಸಲಾಗಿದೆ. ಮಂಗಳವಾರ ಅಮಲ ರಾಮಚಂದ್ರ ಭಟ್ ಅವರು ಮತ್ತೊಮ್ಮೆ ನಗರಸಭೆ ಇಂಜಿನಿಯ‌ರ್ ಕೃಷ್ಣಮೂರ್ತಿ ರೆಡ್ಡಿ ಅವರ ಸಮ್ಮುಖದಲ್ಲಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದಾಗ, ಹಲವು ಲೋಪದೋಷಗಳು ಸ್ಪಷ್ಟವಾಗಿ ಗೋಚರಿಸಿವೆ. ರಟ್ಟು ಇರಿಸಿದಲ್ಲಿ ಸಿಮೆಂಟ್ ಸೊರಿಕೆಯಾಗಿ ಗಟ್ಟಿಯಾಗಿರುವುದು, ಅಲ್ಲಲ್ಲಿ ಸಿಮೆಂಟ್‌ ಬಿದ್ದು ಜಲ್ಲಿ ಕಾಣುತ್ತಿರುವುದು ಕಂಡುಬಂದಿದೆ. ಕೊಳಚೆ ನೀರಿನಲ್ಲಿ ಸೊರಿಕೆಯಾದ ಸಿಮೆಂಟ್ ಗಟ್ಟಿಯಾಗಿರುವುದು ಕಂಡು ಬಂದಿದೆ.



























































 
 

ಈ ಎಲ್ಲ ಲೋಪದೋಷಗಳನ್ನು ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಅವರಿಗೆ ತೋರಿಸಿರುವ ರಾಮಚಂದ್ರ ಭಟ್ ಅವರು ಗುಣಮಟ್ಟದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕೆಲವು ಕಡೆ ಸಿಮೆಂಟ್‌ನಲ್ಲಿ ಸೀಳು ಕಾಣಿಸಿದ್ದು, ಅದರಲ್ಲಿ ತೇವಾಂಶ ಮತ್ತು ಗಾಳಿ ಹೋಗಿ ಕಬ್ಬಿಣಕ್ಕೆ ಹಾನಿಯಾಗಿದೆ ಸಾಧ್ಯತೆಗಳನ್ನು ನೀಡಲಾಗಿದೆ.” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top