ಬೆಂಗಳೂರು: ಹದಿನೇಳು ವರ್ಷದ ಬಾಲಕಿಯೊಬ್ಬಳ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಘಟನೆ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಸಕ್ಕರೆ ಮಂಡಿ ಸಮೀಪದ ಪಾಳು ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮುಂಜಾನೆ ಸುಮಾರು 6.30 ರ ಹೊತ್ತಿಗೆ ಹತ್ಯೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಬಾಲಕಿಯರ ರಕ್ತಸಿಕ್ತ ದೇಹ ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮತ್ತು ಎಫ್ ಎಸ್ ಎಲ್ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಸಾಕ್ಷ್ಯ ಸಂಗ್ರಹ ಕಾರ್ಯ ನಡೆದಿದೆ.
ಇನ್ನು ಈ ಕೊಲೆಯನ್ನು ಶಬೀಲ್ ಎಂಬ ಇಪ್ಪತ್ತು ವರ್ಷದ ಯುವಕ ಮಾಡಿದ್ದಾಗಿ ಹೇಳಲಾಗುತ್ತಿದೆ. ಪರಾರಿಯಾಗಿರುವ ಆತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.ಯಾವ ಆಯುಧ ಬಳಸಿ ಬಾಲಕಿಯ ಕತ್ತು ಸೀಳಿ ಹತ್ಯೆ ನಡೆಸಲಾಗಿದೆ ಎನ್ನುವ ಬಗೆಗೂ ತನಿಖೆ ನಡೆಸಲಾಗುತ್ತಿದೆ. ಆರೋಪಿಯ ಪತ್ತೆಗಾಗಿ ಸ್ಥಳೀಯ ಸಿಸಿಟಿವಿಗಳ ಪರಿಶೀಲನೆ ಸಹ ನಡೆಯುತ್ತಿದೆ.



























