ಇಸ್ರೇಲ್‌ ದಾಳಿಗೆ ಅಲಿ ಲಾರಿಜಾನಿ ಬಲಿ : ಒಪ್ಪಿಕೊಂಡ ಇರಾನ್‌

ಖಮೇನಿ ಬಳಿಕ ಇನ್ನೋರ್ವ ಪ್ರಮುಖ ನಾಯಕನನ್ನು ಸಾಯಿಸಿದ ಇಸ್ರೇಲ್‌

ಟೆಹ್ರಾನ್ : ಇಸ್ರೇಲ್ ಮಂಗಳವಾರ ಮುಂಜಾನೆ ನಡೆಸಿದ ದಾಳಿಯಲ್ಲಿ ಇರಾನ್‌ನ ಹಿರಿಯ ಭದ್ರತಾ ನಾಯಕ ಅಲಿ ಲಾರಿಜಾನಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರ ದೃಢಪಡಿಸಿದೆ.

ಇರಾನ್‌ನ ಸರ್ಕಾರಿ ಸುದ್ದಿ ಮಾಧ್ಯಮ ‘ಮೆಹರ್ ನ್ಯೂಸ್’ ವರದಿಯ ಪ್ರಕಾರ, ದೇಶದ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಿದೆ. ಇಸ್ರೇಲ್ ತನ್ನ ದಾಳಿಯಲ್ಲಿ ಲಾರಿಜಾನಿಯವರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ನಂತರ ಈ ದೃಢೀಕರಣ ಹೊರಬಂದಿದೆ.



























































 
 

ಇರಾನ್‌ನ ಅಭಿವೃದ್ಧಿ ಮತ್ತು ಇಸ್ಲಾಮಿಕ್ ಕ್ರಾಂತಿಗಾಗಿ ಜೀವನವಿಡೀ ಸೇವೆ ಸಲ್ಲಿಸಿದ ಅವರು, ಕೊನೆಗೆ ಹುತಾತ್ಮರಾಗಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ ಇದಕ್ಕೆ ಪ್ರತಿಕ್ರಿಯಿಸಿದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಲಾರಿಜಾನಿಯವರನ್ನು, ವಿಶಿಷ್ಟ ಚಿಂತಕ ಮತ್ತು ಕ್ರಾಂತಿಕಾರಿ ನಾಯಕ ಎಂದು ಬಣ್ಣಿಸಿದೆ.

ಅವರ ರಕ್ತವು ದೇಶದಲ್ಲಿ ಶಕ್ತಿ ಮತ್ತು ರಾಷ್ಟ್ರೀಯ ಜಾಗೃತಿಗೆ ಕಾರಣವಾಗುತ್ತದೆ. ಈ ದಾಳಿಯನ್ನು ನಾವು ಮರೆಯುವುದಿಲ್ಲ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ.

error: Content is protected !!
Scroll to Top