ಮೂಡುಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆ

ಗಂಡನನ್ನು ಅರೆಸ್ಟ್‌ ಮಾಡಿ ಬಿಡುಗಡೆ ಮಾಡಲು ಲೈಂಗಿಕ ಪೀಡನೆ ಎಂದು ಗಂಭೀರ ಆರೋಪ

ಮಂಗಳೂರು: ಮೂಡುಬಿದಿರೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಗೃಹಿಣಿಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಭಾರಿ ಸಂಚಲನವುಂಟು ಮಾಡಿದೆ. ಮಹಿಳೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪೊಲೀಸ್‌ ಅಧಿಕಾರಿಯ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಸಂದರ್ಶನದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಕಾರ್ಯಕರ್ತರಾಗಿದ್ದ ತನ್ನ ಗಂಡನನ್ನು ಅರೆಸ್ಟ್‌ ಮಾಡಿ ಬಿಡುಗಡೆ ಮಾಡಬೇಕಿದ್ದರೆ ನನ್ನ ಜೊತೆ ಸಹಕರಿಸು ಎಂದು ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಇತರ ಹಲವು ಮಹಿಳೆಯರಿಗೆ ಇನ್‌ಸ್ಪೆಕ್ಟರ್‌ ಇದೇ ರೀತಿ ಕಿರುಕುಳ ನೀಡಿದ್ದಾರೆ. ಕೆಲವರು ಈ ಬಗ್ಗೆ ತನಗೆ ತಿಳಿಸಿದ್ದು, ಮೇಲಧಿಕಾರಿಗಳಿಗೆ ದೂರು ನೀಡಿದರೂ ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

























































 
 

ಗಂಡನನ್ನು ಬಿಡುಗಡೆ ಮಾಡಬೇಕಿದ್ದರೆ ಹಣ ಕೊಡು ಇಲ್ಲವೇ ಮಂಚಕ್ಕೆ ಬಾ ಎಂದು ಹೆದರಿಸಿದ್ದಾರೆ. ಗೃಹ ಸಚಿವರಿಗೆ 50 ಲ.ರೂ. ಕೊಡಬೇಕು. ಅಷ್ಟು ಹಣ ಕೊಟ್ಟರೆ ಗಂಡನನ್ನು ಬಿಡುಗಡೆ ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಗೃಹ ಸಚಿವರ ಹೆಸರು ಹೇಳಿ ಹೆದರಿಸುತ್ತಾರೆ, ಮಾತು ಕೇಳದಿದ್ದರೆ ಹೊಡೆಯುತ್ತಾರೆ. ದುಡ್ಡು ಕೊಡದಿದ್ದರೆ ಗಂಡನ ವಿರುದ್ಧ ರೌಡಿಶೀಟರ್‌ ತೆರೆದು ಕಿರುಕುಳ ನೀಡುವ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ನನ್ನ ಜೊತೆ ಮಲಗು ಎಂದು ಪೀಡಿಸುತ್ತಿದ್ದ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ ಎಂದು ಮಹಿಳೆ ದೂರಿದ್ದಾರೆ. ಸಂತ್ರಸ್ತ ಮಹಿಳೆ ಈಗ ಡಿಜಿಪಿ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.

ಸಂದೇಶ್ ಪಿ.ಜಿ. ಮಹಿಳೆಯರ ಮನೆ ಗೇಟ್ ಹಾರುತ್ತಾರೆ. ಮಹಿಳೆಯರ ಕೈ ಹಿಡಿದು ಡ್ಯಾನ್ಸ್ ಮಾಡ್ತಾರೆ. ಕಿರುಕುಳಕ್ಕೆ ಒಳಗಾದರೂ ಮಹಿಳೆಯರು ಮೌನಕ್ಕೆ ಶರಣಾಗಿದ್ದಾರೆ. ಮೂಡಬಿದಿರೆಯ 20ಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಎಸಿಪಿ ಶ್ರೀಕಾಂತ್ ಇಲಾಖೆಯಲ್ಲಿ ಹೆಣ್ಣಮಕ್ಕಳನ್ನು ಮಂಚಕ್ಕೆ ಕರಿಯೋದು ಕಾಮನ್ ಅಂತಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

error: Content is protected !!
Scroll to Top