ಲಕ್ನೋ: ಉಗ್ರಗಾಮಿ ಸಂಘಟನೆ ಐಸಿಸ್ ಜೊತೆಗೆ ಸಂಬಂಧ ಹೊಂದಿರುವ ಆರೋಪದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
ಬಂಧಿತನನ್ನು ಹರಿಷ್ ಅಲಿ(19) ಎಂದು ಗುರುತಿಸಲಾಗಿದೆ.
ಈತ ದಂತ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ಐಸಿಸ್ ಆನ್‌ಲೈನ್ ಮಾಡ್ಯೂಲ್ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ. ಈತ ಸಹರಾನ್‌ಪುರ ನಿವಾಸಿಯಾಗಿದ್ದಾನೆ.
ಈತನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿರುವುದಾಗಿದೆ. ದೇಶದಲ್ಲಿ ಐಸಿಸ್ ಆನ್‌ಲೈನ್ ನೆಟ್ವರ್ಕ್ ಚಟುವಟಿಕೆಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ಅಲಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈತ ಐಸಿಸ್ ಭಯೋತ್ಪಾದಕರ ಜೊತೆಗೆ ನಂಟು ಹೊಂದಿದ್ದಾಗಿ ತಿಳಿದು ಬಂದಿದೆ.



























