ಯಕ್ಷಗುರು ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ತೆಂಕಬೈಲು ಪ್ರಶಸ್ತಿ

ಕಾಸರಗೋಡು: ಜಿಲ್ಲೆಯ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಿಂದ ಕೊಡಲ್ಪಡುವ ತೆಂಕಬೈಲು ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಗವತರು, ಹಿಮ್ಮೇಳದ ಗುರು ಮೋಹನ ಬೈಪಾಡಿತ್ತಾಯರಿಗೆ ಉಜಿರೆಯ ಓಡಲದ ಶ್ರೇಯ ನಿವಾಸದಲ್ಲಿ ಪ್ರದಾನಿಸಲಾಯಿತು.

ಪ್ರಶಸ್ತಿಯ ಪ್ರಾಯೋಜಕ ಮತ್ತು ಭಾಗವತ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ಹಿಮ್ಮೇಳ ಕಲಾವಿದ ಚಂದ್ರಶೇಖರ ಭಟ್ ಕೊಂಕಣಾಜೆ, ಉಪನ್ಯಾಸಕ, ಕಲಾವಿದ ಜಯಪ್ರಕಾಶ ನಾಕೂರು, ಹವ್ಯಾಸಿ ಭಾಗವತ ವೆಂಕಟ್ರಮಣ ರಾವ್ ಬನ್ನೆಂಗಳ, ಉಪನ್ಯಾಸಕ ಪ್ರೊ. ಜಿ. ಪಿ. ಹೆಗಡೆ ಮೋಹನ ಬೈಪಾಡಿತ್ತಾಯರನ್ನು ಅಭಿನಂದಿಸಿ ಮಾತನಾಡಿದರು.

ಕಲಾವಿದ ವಿಶ್ವನಾಥ ಕೊಯ್ಯೂರು ಪ್ರಶಸ್ತಿ ಪತ್ರ ವಾಚಿಸಿದರು.



























































 
 

ಪ್ರಶಸ್ತಿ ಪುರಸ್ಕೃತ ಮೋಹನ ಬೈಪಾಡಿತ್ತಾಯರ ಪತ್ನಿ ಲಲಿತಾ ಅವರನ್ನು ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಮೋಹನ ಬೈಪಾಡಿತ್ತಾಯ ಅವರು ಇದೇ ಸಂದರ್ಭದಲ್ಲಿ ಭಾಗವತ ತೆಂಕಬೈಲು ದಿ. ತಿರುಮಲೇಶ್ವರ ಶಾಸ್ತ್ರಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು ಪೆರ್ಲ ಯಕ್ಷ ತರಬೇತಿ ಕೇಂದ್ರದ ಕಲಾ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ಸ್ಥಾಪಕ ಮತ್ತು ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಕನ್ಯಾಡಿ ಯಕ್ಷಭಾರತಿ ಸಂಚಾಲಕ, ಭಾಗವತ ಮಹೇಶ ಕನ್ಯಾಡಿ ವಂದಿಸಿದರು .ಅಧ್ಯಾಪಕ ಗೋವರ್ಧನ ಎಮ್. ಮೂಡಬಿದಿರೆ , ಹಿಮ್ಮೇಳ ಕಲಾವಿದ ನಾರಾಯಣ ಶರ್ಮ ಸಹಕರಿಸಿದರು.

error: Content is protected !!
Scroll to Top