ಕೋಳಿ ಅಂಕಕ್ಕೆ ದಾಳಿ ಮಾಡಿಸಿದ್ದಾಗಿ ಆರೋಪಿಸಿ ವ್ಯಕ್ತಿಯ ಮೇಲೆ ಹಲ್ಲೆ: ದೂರು ದಾಖಲು

ಹೆಬ್ರಿ: ವ್ಯಕ್ತಿಯೊಬ್ಬರ ಮೇಲೆ ಕೋಳಿ ಅಂಕಕ್ಕೆ ದಾಳಿ ಮಾಡಿಸಿರುವುದಾಗಿ ಆರೋಪಿಸಿ ಹಲ್ಲೆ ನಡೆಸಿದ ಘಟನೆ ಹೆಬ್ರಿಯಲ್ಲಿ ವರದಿಯಾಗಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ನಾಲ್ಕೂರು ಗ್ರಾಮದ ವಿಠಲ ಎಂದು ಗುರುತಿಸಲಾಗಿದೆ.

ಕೆಂಜೂರು ಜಯಕರ ಶೆಟ್ಟಿ ಎಂಬವರೇ ಹಲ್ಲೆ ನಡೆಸಿದ ಆರೋಪಿ.



























































 
 

ವಿಠಲ ಅವರು ಮುದ್ದೂರಿಗೆ ಹೋಗುವ ಸಂದರ್ಭದಲ್ಲಿ ಜಯಕರ ಅವರು ಪಾದೆ ಮಠದಲ್ಲಿ ನಡೆದ ಕೋಳಿ ಅಂಕಕ್ಕೆ ದಾಳಿ ಮಾಡಿಸಿರುವುದಾಗಿ ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾಗಿ ವಿಠಲ ಅವರು ಹೆಬ್ರಿ ಠಾಣೆಗೆ ದೂರು ನೀಡಿರುವುದಾಗಿದೆ.

error: Content is protected !!
Scroll to Top