ಕಬ್ಬಿನ ತೋಟದಲ್ಲಿ ಮಹಿಳೆಯ ಹತ್ಯೆ: ಆರೋಪಿ ಪೊಲೀಸ್ ವಶಕ್ಕೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಬ್ಬಿನ ತೋಟವೊಂದರಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೃತರನ್ನು ‌ಸುಜಾತಾ ಪವಾರ(34) ಎಂದು ಗುರುತಿಸಲಾಗಿದೆ. ಸುಜಾತಾರನ್ನು ಮಾ. 5 ರಂದು ಅಥಣಿ ಪಟ್ಟಣದ ಪ್ರದೀಪ್ ಗುಂಡ ಎಂಬವರ ಕಬ್ಬಿನ ತೋಟದಲ್ಲಿ ಹತ್ಯೆ ಮಾಡಲಾಗಿದೆ.

ಸುಜಾತಾ ತನ್ನ ಗಂಡನ ಜೊತೆಗೆ ಸಂಬಂಧ ಮುರಿದುಕೊಂಡು ‌ಅಥಣಿಯ ತನ್ನ ತವರಿನಲ್ಲಿ ಜೀವನ ನಡೆಸುತ್ತಿದ್ದರು. ಈ‌ ಸಂದರ್ಭದಲ್ಲಿ ಕುಮಾರ್ ಹವಾಲ್ದಾರ್ ಎಂಬಾತನ ಜೊತೆಗೆ ಆಕೆಗೆ ನಂಟು ಬೆಳೆದಿತ್ತು. ಮಹಿಳೆಯ ಆಸ್ತಿ ಕಬಳಿಸಿ ಕುಮಾರ್ ಆಕೆಯನ್ನು ಕೊಲೆ ಮಾಡಿದ್ದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಆಕೆಯನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

























































 
 

ಆರೋಪಿ ಕುಮಾರ್‌ನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!
Scroll to Top