ಅಪಾಯಕಾರಿ ವ್ಹೀಲಿಂಗ್: ಇಬ್ಬರು ಯುವಕರ ಬಂಧನ

ಹುಣಸೂರು: ಅಪಾಯಕಾರಿ ಎನ್ನುವ ರೀತಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಇಬ್ಬರು ಯುವಕರು ಸದ್ಯ ಹುಣಸೂರು ಪೊಲೀಸರ ಅತಿಥಿಗಳಾಗಿದ್ದಾರೆ.

ಬಂಧಿತರನ್ನು ಶಬ್ಬೀರ್ ‌ನಗರದ ನಿವಾಸಿ ಫುರ್ಸಾನ್ ಮತ್ತು ಅವನ ಗೆಳೆಯ ಎಂದು ಗುರುತಿಸಲಾಗಿದೆ.

ಈ ಇಬ್ಬರು ಹುಣಸೂರು – ಮಡಿಕೇರಿ ಹೆದ್ದಾರಿಯ ಹಾಳಗೆರೆ ಸಮೀಪ ಬೈಕ್ ವ್ಹೀಲಿಂಗ್ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಈ ಪ್ರಕರಣದ ಮಾಹಿತಿ ಪಡೆದ ಹುಣಸೂರು ಪೊಲೀಸರು, ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಯುವಕರನ್ನು ಬಂಧಿಸಿದ್ದು, ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

























































 
 

ಈ ಇಬ್ಬರೂ ಆರೋಪಿಗಳ ಮೇಲೆ ಕೇಸು ದಾಖಲಾಗಿದೆ.

error: Content is protected !!
Scroll to Top