ಮಂಗಳೂರು: ಕೂಲಿ ಕೆಲಸಕ್ಕೆಂದು ಹೊರಜಿಲ್ಲೆಯ ಮಹಿಳೆಯನ್ನು ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಚಾರ ಮಾಡಲು ಯತ್ನಿಸಿದ ಘಟನೆ ಶುಕ್ರವಾರ ಮಂಗಳೂರಿನ ಲಾಲ್‌ಭಾಗ್‌ನಲ್ಲಿ ಸಂಭವಿಸಿದೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪಲಾಯನ ಮಾಡಿದ್ದಾನೆ.
ಉರ್ವಸ್ಟೋರ್ ಜಂಕ್ಷನ್‌ನಲ್ಲಿ ಎಂದಿನಂತೆ ಕೆಲಸ ಅರಸಿಕೊಂಡು ನಿಂತಿದ್ದ 35ರ ಹರೆಯದ ಮಹಿಳೆಯನ್ನು ಆರೋಪಿ ತನ್ನ ಮನೆಯಲ್ಲಿ ಕೆಲಸ ಇದೆ ಎಂದು ಹೇಳಿ ಲಾಲ್‌ಬಾಗ್‌ಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಲಾಲ್‌ಬಾಗ್‌ನ ಪಂಪ್‌ಹೌಸ್‌ನ ಜನವಸತಿಯಿಲ್ಲದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ. ಮಹಿಳೆ ಬೊಬ್ಬೆ ಹಾಕಿದಾಗ ಜನ ಸೇರಿದ್ದು, ಆಗ ಆರೋಪಿ ಪಲಾಯನ ಮಾಡಿದ್ದಾನೆ.
ಮಹಿಳೆಯ ಕೈಗೆ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.


























