ಬೈಕ್‌ಗಳ ನಡುವೆ ಭೀಕರ ಅಪಘಾತ: ಯುವಕ ಮೃತ್ಯು

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಎರಡು ಬೈಕುಗಳ ‌ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ‌ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಶಂಭೂರು ನಿವಾಸಿ ರಕ್ಷಿತ್ ‌ಶೆಟ್ಟಿ(43) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಕ್ಷಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

























































 
 

ಉತ್ತಮ ವಿಡಿಯೋಗ್ರಾಫರ್ ಆಗಿದ್ದ ಅವರು ಬಂಟ್ವಾಳ ವಲಯ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಅವರ ಮನೆಯಲ್ಲಿ ತಮ್ಮ ಮಗಳ 10 ನೇ ಹುಟ್ಟುಹಬ್ಬಕ್ಕೆ ‌ಸಿದ್ಧತೆ ಸಹ ನಡೆಸಿದ್ದರು. ಆದರೆ ವಿಧಿ ಅವರ ಪಾಲಿಗೆ ಕ್ರೂರವಾಗಿ ಪರಿಣಮಿಸಿದೆ.

ರಕ್ಷಿತ್ ಅವರ ಸಹೋದರ ಸಹ ಹಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ. ಇದೀಗ ಮನೆಗೆ ಆಸರೆಯಾಗಿದ್ದ ರಕ್ಷಿತ್ ಅವರು ಸಹ ಮೃತಪಟ್ಟಿದ್ದು, ಬಡ ಕುಟುಂಬಕ್ಕೆ ದಿಕ್ಕೇ ಕಾಣದಂತಾಗಿದೆ.

error: Content is protected !!
Scroll to Top