ಬಂಟ್ವಾಳ: ವಂಚನೆ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಇನ್ನೂ ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇರಳದಲ್ಲಿ ವಶಕ್ಕೆ ಪಡೆದಿದ್ದಾರೆ.
ಕೇರಳದ ಎರ್ನಾಕುಲಂನ ಕುಟ್ಟಿಂಚಾಲ್ ತರಂಪಳ್ಳಿ ನಿವಾಸಿ ಪ್ರಿನ್ಸ್ ಟಿ. ಜೆ. ಜೋಶ್ ಬಂಧಿತ ಆರೋಪಿ.
ಈತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ.90/2016ರಲ್ಲಿ ಐಪಿಸಿ ៩០ 465, 468, 471, 420, 379 8 3408 ದಾಖಲಾಗಿದ್ದು, ನಂತರ ನ್ಯಾಯಾಲಯದಲ್ಲಿ 2.2. ನಂ.1060/2019 ಆಗಿ ವಿಚಾರಣೆ ನಡೆಯುತ್ತಿತ್ತು.
ಆರೋಪಿ ಜೋಶ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯದಿಂದ ಜಾರಿಗೊಂಡಿದ್ದ ವಾರಂಟ್ ಹಿನ್ನೆಲೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.ಪೊಲೀಸರ ವಿಶೇಷ ಕಾರ್ಯಾಚರಣೆಯ ಮೂಲಕ ಆರೋಪಿ ಪ್ರಿನ್ಸ್ ಟಿ.ಜೆ. ಜೋಶ್ ನನ್ನು ಕೇರಳ ರಾಜ್ಯದ ಕುಟ್ಟಂಪುಝ ಪ್ರದೇಶದಲ್ಲಿ ಬಂಧಿಸಿ, ಬಳಿಕ ಮಾನ್ಯ ACJ & JMFC ನ್ಯಾಯಾಲಯ, ಬಂಟ್ವಾಳ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


























