ಕೆರೆಯಲ್ಲಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ಮಡಿಕೇರಿ: ಕೆರೆಯಲ್ಲಿ ಈಜಾಟ ನಡೆಸಲು ಹೋಗಿದ್ದ ಕಾರ್ಮಿಕನೊಬ್ಬ ‌ಮುಳುಗಿ ಸಾವನ್ನಪ್ಪಿದ ಘಟನೆ ಸಿದ್ಧಾಪುರ ಠಾಣಾ ವ್ಯಾಪ್ತಿಯ ಹಾಲುಗುಂದದಲ್ಲಿ ‌ನಡೆದಿದೆ.

ಮೃತನನ್ನು ‌ಕಾಫಿ ತೋಟದ ಕಾರ್ಮಿಕನಾಗಿದ್ದ ಅಣ್ಣಪ್ಪ (26) ಎಂದು ಗುರುತಿಸಲಾಗಿದೆ.

ಅಣ್ಣಪ್ಪ ಅವರು ಗುರುವಾರ ಸಂಜೆ ಕಾಫಿ ತೋಟದ ಕೆರೆಗೆ ಈಜಾಟಕ್ಕೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಣ್ಣಪ್ಪನ ಜೊತೆ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ಅವರಿಗಾಗಿ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

























































 
 

ಮೃತ ತಾಯಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top