ಬೆಂಗಳೂರು: ಲಿವ್ ಇನ್ ಟುಗೆದರ್ನಲ್ಲಿದ್ದ ಗೆಳತಿಯನ್ನು ವೈರ್ ಬಳಸಿ ಕತ್ತು ಬಿಗಿದು ಹತ್ಯೆ ಮಾಡಿದ ಘಟನೆ ವರ್ತೂರಿನಲ್ಲಿ ನಡೆದಿದೆ.
ಮೃತಳನ್ನು ಕೊಡಗು ಮೂಲದ ರಂಜಿತಾ ಎಂದು ಗುರುತಿಸಲಾಗಿದೆ. ಅಯ್ಯಪ್ಪ ಎಂಬವನೇ ಕೊಲೆ ಮಾಡಿರುವ ಆರೋಪಿ.
ಆರೋಪಿ ಮತ್ತು ಕೊಲೆಯಾದ ರಂಜಿತಾ ಲಿವಿನ್ ಟುಗೆದರ್ ಸಂಬಂಧದಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ವಿವಾಹವಾಗಿದ್ದು, ಈ ಸಂಗತಿ ರಂಜಿತಾಗೆ ಗೊತ್ತಿರಲಿಲ್ಲ. ಆದರೆ ಸತ್ಯ ಗೊತ್ತಾದ ಬಳಿಕ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಗಲಾಟೆ ತಾರಕಕ್ಕೇರಿದಾಗ ಆರೋಪಿ ಅಯ್ಯಪ್ಪ ರಂಜಿತಾಳನ್ನು ಕೊಲೆ ಮಾಡಿದ್ದಾನೆ.
ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.


























