ಸುಳ್ಯ: ನೂತನವಾದ ಕೋಕೋ ಮಿತ್ರ ಎಂಬ ಹೆಸರಿನ ಪರಿಶುದ್ಧ ತೆಂಗಿನೆಣ್ಣೆ ಮತ್ತು ಇತರ ವಸ್ತುಗಳ ತಯಾರಿಕಾ ಘಟಕವು ಮಾ. 15 ರ ಆದಿತ್ಯವಾರದಂದು ನಿಂತಿಕಲ್ಲಿನಲ್ಲಿ ಶುಭಾರಂಭಗೊಳ್ಳಲಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ, ಮಂಗಳೂರು ಇಲ್ಲಿನ ಪರಮ ಪೂಜ್ಯ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಪವಿತ್ರ ಪಾವಕ ಪ್ರಜ್ವಲನೆ ಮತ್ತು ಆಶೀರ್ವಚನ ನೀಡಲಿದ್ದಾರೆ.ಶಾಸಕಿ ಭಾಗೀರಥಿ ಮುರುಳ್ಯ ಅವರು ಘಟಕದ ಕಚೇರಿ ಉದ್ಘಾಟನೆ ಮಾಡಲಿದ್ದಾರೆ.
ಜಾನಪದ ವಿವಿ ಹಾವೇರಿಯ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಕೋಕೋ ಮಿತ್ರ ಲೋಗೋ ಅನಾವರಣ ಮಾಡಲಿದ್ದಾರೆ. ಎಣ್ಣೆ ಪ್ಯಾಕಿಂಗ್ ಯಂತ್ರ ಘಟಕದ ಉದ್ಘಾಟನೆಯನ್ನು ಶಶಿಕುಮಾರ್ ರೈ ಬಾಲ್ಗೊಟ್ಟು ನಿರ್ದೇಶಕರು, ಎಸ್. ಡಿ. ಸಿ. ಸಿ. ಬ್ಯಾಂಕ್ ಮಂಗಳೂರು ಅವರು ನಿರ್ವಹಿಸಲಿದ್ದಾರೆ.
ಹಾಗೆಯೇ ಎಣ್ಣೆ ಪ್ಯಾಕಿಂಗ್ ಯಂತ್ರದ ಚಾಲನೆಯನ್ನು ಕೇಶವ ಅಮೈ ಕಲಾಯಿಗುತ್ತು , ಅಧ್ಯಕ್ಷರು, ಸ್ಪಂದನಾ ಸಮುದಾಯ ಸಹಕಾರ ಸಂಘ ನಿ., ಕಡಬ ಅವರು ಮಾಡಲಿದ್ದು, ವೆಬ್ ಸೈಟ್ ಲೋಕಾರ್ಪಣೆಯನ್ನು ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ, ಪುತ್ತೂರು ಅವರು ನಿರ್ವಹಿಸಲಿದ್ದಾರೆ. ಪ್ರಸನ್ನ ಭಟ್ ಅಧ್ಯಕ್ಷರು, ಜನತಾ ಬಝಾರ್, ಮಂಗಳೂರು. ಅವರು ಗಾಣಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಸಂತ ನಡುಬೈಲು ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಎಣ್ಮೂರು – ಮುರುಳ್ಳ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚಿದಾನಂದ ರೈ, ವಚನಾ ಪ್ರದೀಪ್, ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಸಂಯೋಜನೆ, ಪ್ರಸ್ತುತಿಯನ್ನು Jc. HGF ಸೀತಾರಾಮ ಕೇವಳ, ಜೇಸೀಯ ರಾಷ್ಟ್ರೀಯ ತರಬೇತುದಾರರು, ನಿವೃತ್ತ ಪ್ರಾಂಶುಪಾಲರು ನಡೆಸಿಕೊಡಲಿದ್ದಾರೆ.ಸಂಸ್ಥೆಯ ಮುಖ್ಯಸ್ಥ ನಾಗೇಶ್ ಕೆಡೆಂಜಿ, ಉತ್ಪಾದನಾ ವಿಭಾಗದ ಮುಖ್ಯಸ್ಥ ಯೋಗೀಶ್ ಕೆಡೆಂಜಿ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಸಂತ್ ಹೇಮಳ ಅವರು ಕಾರ್ಯಕ್ರಮಕ್ಕೆ ಸರ್ವರನ್ನೂ ಆಮಂತ್ರಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ತಂಪಾದ, ಸ್ವಾಭಾವಿಕ ತಾಪಮಾನದಲ್ಲಿ ತಯಾರಾಗುತ್ತಿರುವ ಕೋಕೋ ಮಿತ್ರ ತೆಂಗಿನೆಣ್ಣೆ, ದೇವರಿಗೆ ಪ್ರಿಯವೆಂದು ಶಾಸ್ತ್ರದಲ್ಲಿ ಹೇಳಲಾದ ಪರಿಶುದ್ಧ ಕೋಕೋ ಮಿತ್ರ ಎಳ್ಳೆಣ್ಣೆ, ಕೋಕೋ ಮಿತ್ರ ರೈಸ್ ರೊಟ್ಟಿ, ಕೋಕೋ ಮಿತ್ರ ಶುದ್ಧ ಜೇನು ತುಪ್ಪ, ಕೋಕೋ ಮಿತ್ರ ದೇಸೀ ದನದ ಶುದ್ಧ ಪರಿಶುದ್ಧ ತುಪ್ಪ ಗ್ರಾಹಕರಿಗೆ ಲಭ್ಯವಾಗಲಿದೆ.


























