ಸಹಪಾಠಿಯ ಪ್ರೇಮ ಕಾಟಕ್ಕೆ ಬೇಸತ್ತು ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೀದರ್: ಪ್ರೇಮಿಸುವಂತೆ ‌ಕಾಟ ಕೊಡುತ್ತಿದ್ದ ಸಹಪಾಠಿಯ ಕಾಟಕ್ಕೆ ಬೇಸತ್ತು ಶಾಲಾ ಮಹಡಿಯಿಂದ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಭೆಮಳಖೇಡ ಗ್ರಾಮದಲ್ಲಿ ನಡೆದಿದೆ.

ಮದೀಯಾ ನಶೀರ್ ಪಾಶಾ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ಆಕೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ.

ಪ್ರೀತಿ ಮಾಡುವಂತೆ ಸಹಪಾಠಿ ಒತ್ತಡ ಹೇರುತ್ತಿದ್ದು, ಚುಡಾಯಿಸುತ್ತಿದ್ದನು ಎಂಬುದಾಗಿ ತಿಳಿದು ಬಂದಿದೆ. ಇದರಿಂದಲೇ ಮನನೊಂದು ಆಕೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಹೇಳಲಾಗುತ್ತಿದೆ. ಆಕೆಯನ್ನು ಚುಡಾಯಿಸುತ್ತಿರುವ ದೃಶ್ಯಗಳು ಸಿಸಿಟಿವಿ ಯಲ್ಲಿಯೂ ಸೆರೆಯಾಗಿದೆ.























































 
 

ಭೆಮಳಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top