ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿದ ಸನತ್ ಮತ್ತು ಹರ್ಷಿತಾ ಆರತಕ್ಷತೆ ಪ್ರಯುಕ್ತ ಯಕ್ಷ ಗಾಯನ ಜರಗಿತು.

ಭಾಗವತರಾಗಿ ಮಹೇಶ್ ಕನ್ಯಾಡಿ, ಸುಶಾಂತ್ ಆಚಾರ್ಯ ಕೈಕಂಬ, ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ. ಆಚಾರ್ಯ ಅಲಂಕಾರು ಮತ್ತು ಸಂಧ್ಯಾ ಬಂಟ್ವಾಳ ಭಾಗವಹಿಸಿದರು. ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮೋಹನ ಶರವೂರು ಭಾಗವಹಿಸಿದ್ದರು.
ಕಲಾವಿದ ಸತೀಶ್ ಆಚಾರ್ಯ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರನ್ನು ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ. ಎಲ್. ಗೌರವಿಸಿದರು.
ಕುಟುಂಬದ ಹಿರಿಯರಾದ ಯಕ್ಷಗಾನ ಕಲಾವಿದ ಉಮೇಶ ಆಚಾರ್ಯ ಗೇರುಕಟ್ಟೆ, ಯಕ್ಷತೀರ್ಥ ಕಲಾ ಸೇವೆ ನೂರಾರುಬೆಟ್ಟಿನ ಸಂಚಾಲಕರಾದ ಸದಾನಂದ ಆಚಾರ್ಯ, ವಿಘ್ನೇಶ್ ಪುರೋಹಿತ ಮೂಡಬಿದಿರೆ, ಕಟೀಲು ಮೇಳದ ಕಲಾವಿದ ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಕಳಿಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಯಕ್ಷಗಾನ ಕವಿ ಅರ್ಥಧಾರಿ ಪ್ರದೀಪ್ ಚಾರ, ಉಪ್ಪಿನಂಗಡಿ ಕಾಳಿಕಾಂಬ ಯಕ್ಷಕಲಾ ಟ್ರಸ್ಟಿನ ಬಿ. ಸುಬ್ರಮಣ್ಯ ರಾವ್, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗಣೇಶ್ ಭಟ್ ಕುತ್ರೊಟ್ಟು, ಯಕ್ಷ ಭಾರತಿ ಬೆಳ್ತಂಗಡಿಯ ಟ್ರಸ್ಟಿಗಳಾದ ಕುಸುಮಾಕರ ಕುತ್ತೋಡಿ, ಕೌಶಿಕ್ ರಾವ್, ಬಲ್ಯ ವಿನಾಯಕ ಯಕ್ಷಗಾನ ಮಂಡಳಿ ಅಧ್ಯಕ್ಷ ಜಯರಾಮ ಗೌಡ ನಾಲ್ಗುತ್ತು, ಅಲಂಕಾರು ಶ್ರೀ ದುರ್ಗಾಂಬಾ ಕಲಾಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ನೇರೆಂಕಿ, ನಿವೃತ್ತ ಶಿಕ್ಷಕ ಯುವರಾಜ ಅನಾರು, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಮಾತೃ ಮಂಡಳಿಯ ಸದಸ್ಯರು, ಬೆಳ್ತಂಗಡಿ ಅಳದಂಗಡಿ, ಉಪ್ಪಿನಂಗಡಿ ಮತ್ತು ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು , ಉಪ ಪ್ರಾಂಶುಪಾಲರು,ಅಧ್ಯಾಪಕ ವೃಂದದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾಭಿಮಾನಿಗಳಿಗೆ, ಬಂಧುಗಳಿಗೆ ಸಂಸ್ಕಾರ ಬಿಂದು ಮತ್ತು ಸಂಸ್ಕಾರ ಸುಧಾ ಪುಸ್ತಕಗಳನ್ನು ವಿತರಿಸಲಾಯಿತು.
























