ಕರೆಂಟ್ ಶಾಕ್‌ ಹೊಡೆದು ಇಬ್ಬರು ಸಾವು

ತೆಲಂಗಾಣ: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಹೋಗುತ್ತಿದ್ದ ಇಬ್ಬರಿಗೆ ಕರೆಂಟ್ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಚ ಘಟನೆ ಮೇದರೀಪೇಟೆ ಎಂಬಲ್ಲಿ ನಡೆದಿದೆ.

ಸಲ್ಲಾ ‌ಲಕ್ಷ್ಮೀನಾರಾಯಣ ಮತ್ತು ಚಂದನಗರಿಯ ನಾಗರಾಜು ಎಂಬವರೇ ಮೃತ ದುರ್ದೈವಿಗಳು.

ಮಂಚೇರಿಯಲ್ ಜಿಲ್ಲೆಯ ಪೆಟ್ರೋಲ್ ಬಂಕ್ ಒಂದರ ಸಮೀಪ ಈ ದುರಂತ ಸಂಭವಿಸಿದೆ. ಮೂವರು ಕೂಲಿ ಕಾರ್ಮಿಕರು ಎತ್ತರವಾದ ಕಬ್ಬಿಣದ ಸ್ಟಾಂಡ್ ಅನ್ನು ಸಾಗಿಸುತ್ತಿದ್ದರು. ಆ ಸ್ಟ್ಯಾಂಡ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಅದೃಷ್ಟವಶಾತ್ ಪಾರಾಗಿದ್ದಾನೆ.





















































 
 

error: Content is protected !!
Scroll to Top