ಕರೆಂಟ್ ಶಾಕ್‌ನಿಂದ ವಿದ್ಯಾರ್ಥಿ ಸಾವು: ಶವವನ್ನು ನೀರಿಗೆಸೆದ ‌ಸ್ನೇಹಿತರು

ರಾಯಚೂರು: ಕರೆಂಟ್ ಶಾಕ್‌ನಿಂದ 9 ನೇ ತರಗತಿಯ ಬಾಲಕನೊಬ್ಬ ಮೃತಪಟ್ಚ ಘಟನೆ ನಡೆದಿದ್ದು, ಸ್ನೇಹಿತರು ಆತನ ಶವವನ್ನು ಕೆರೆಗೆಸೆದ ಘಟನೆ ನಡೆದಿದೆ.

ಮೃತನನ್ನು ಗುಂಡಸಾಗರ ‌ಗ್ರಾಮದ ಕಾರ್ತಿಕ್(15) ಎಂದು ಗುರುತಿಸಲಾಗಿದೆ.

ಕಾರ್ತಿಕ್ ಓದುತ್ತಿದ್ದ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕೆ ಹೊಸ ಬಟ್ಟೆ ಖರೀದಿ ಮಾಡಲು ಹತ್ತನೇ ತರಗತಿಯ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಹೋಗಿದ್ದ. ದಾರಿ ಮಧ್ಯೆ ನೀರು ಕುಡಿಯಲು ಬಾವಿಯೊಂದರ ಸಮೀಪ ಹೋಗಿದ್ದು, ಕರೆಂಟ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.





















































 
 

ಈ ವೇಳೆ ಗಾಬರಿಗೊಂಡ ಸ್ನೇಹಿತರು ಭಯದಿಂದ ಶವಕ್ಕೆ ಕಲ್ಲು ಕಟ್ಟಿ ಗೋಣಿ ಚೀಲದಲ್ಲಿ ಹಾಕಿ ನೀರಿಗೆಸೆದಿದ್ದಾರೆ.

ಕಾರ್ತಿಕ್ ಕಾಣದೇ ಇದ್ದಾಗ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಲಾಗಿ ಆತನ ಸ್ನೇಹಿತರು ನಡೆದ ಸಂಗತಿಯನ್ನು ತಿಳಿಸಿದ್ದಾರೆ.

ಲಿಂಗಸುಗೂರು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top