ಹುಬ್ಬಳ್ಳಿ: ನೈಋತ್ಯ ರೈಲ್ವೆ ಗಾಲ್ಫ್ ಮೈದಾನದಲ್ಲಿರುವ ಬನ್ನಿ ಮಹಾಕಾಳಿ ದೇಗುಲ ಮತ್ತು ವಿವೇಕಾನಂದರ ಪ್ರತಿಮೆಯನ್ನು ತೆರವು ಮಾಡಿರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳಾದ ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ನೈಋತ್ಯ ರೈಲ್ವೆ ವಿಭಾಗೀಯ ಕಚೇರಿಗೆ ಬಂದ ಪ್ರತಿಭಟನೆ ನಿರತರು ತಮ್ಮ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಿಭಾಗೀಯ ವ್ಯವಸ್ಥಾಪಕರ ನಾಮಫಲಕವನ್ನು ಕಿತ್ತೆಸೆದು ಅಸಮಾಧಾನ ಪ್ರದರ್ಶಿಸಿದರು.
ದೇಗುಲ ಮತ್ತು ವಿವೇಕಾನಂದರ ಮೂರ್ತಿ ತೆರವು ಮಾಡಿ ಹಿಂದೂಗಳ ಭಾವನೆಗಳ ಜೊತೆ ಅಧಿಕಾರಿಗಳು ಆಟವಾಡಿದ್ದಾರೆ. ತಕ್ಷಣ ಅವೆರಡನ್ನೂ ಮತ್ತೆ ಪ್ರತಿಷ್ಠಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಹಿಂದೂ ಮುಖಂಡರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದ ಘಟನೆಯೂ ನಡೆಯಿತು.
























