ಹೊಸಯಲ್ಲಾಪುರ: ತ್ಯಾಜ್ಯ ಗುಡ್ಡಕ್ಕೆ ಬೆಂಕಿ, ವಿಷ ಗಾಳಿಯ ಭಯ

ಧಾರವಾಡ: ಹೊಸಯಲ್ಲಾಪುರದ ಬೃಹತ್ ತ್ಯಾಜ್ಯ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ವಿಷಕಾರಿ ದಟ್ಟ ಹೊಗೆ ವಿದ್ಯಾಕಾಶಿಯನ್ನು ‌ನಲುಗಿಸಿದೆ.

ಬೆಂಕಿಯ ಜ್ವಾಲೆ ತೀವ್ರವಾಗುತ್ತಿದ್ದು ಇದು ಸಮೀಪವಾಸಿಗಳು, ಸಾರ್ವಜನಿಕರನ್ನು ‌ಸಂಕಷ್ಟಕ್ಕೆ ದೂಡಿದೆ. ಪ್ಲಾಸ್ಟಿಕ್, ರಬ್ಬರ್ ಸೇರಿದಂತೆ ಇನ್ನೂ ಹಲವು ರೀತಿಯ ಪ್ರಕೃತಿಗೆ ಮಾರಕವಾದ ಅಂಶಗಳು ಈ ತ್ಯಾಜ್ಯದೊಳಗೆ ಇದ್ದು ಕಪ್ಪು ಬಣ್ಣದ ದಟ್ಟ ಹೊಗೆ ನಗರದಾದ್ಯಂತ ಆವರಿಸಲಾರಂಭಿಸಿದೆ.

ರಸ್ತೆಗಳ ಸುತ್ತೆಲ್ಲಾ ಕಪ್ಪು ಹೊಗೆ ಆವರಿಸಿದ ಪರಿಣಾಮ ವಾಹನ ಸವಾರರು ಸಹ ಪರದಾಡುವಂತಾಗಿದೆ. ಅಪಘಾತದ ಭೀತಿಯೂ ಎದುರಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿಕೊಂಡು, ಮುಖ ಮುಚ್ಚಿಕೊಂಡು ನಡೆದಾಡುವ ದೃಶ್ಯ ಕಂಡು ಬರುತ್ತಿದೆ.





















































 
 

ನಗರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

error: Content is protected !!
Scroll to Top