ಪುತ್ತೂರು: ಪ್ರಣತಿ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಮಕ್ಕಳ ಮನೆಯ ವಾರ್ಷಿಕೋತ್ಸವ ‘ವರ್ಷ ಸಂಭ್ರಮ 2026’ ಪುತ್ತೂರಿನ ಟೌನ್ ಹಾಲ್‌ನಲ್ಲಿ ನಡೆಯಿತು.
ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು, ಹಾಗೆಯೇ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಧರ ರೈ ಮತ್ತು ಮಕ್ಕಳ ಮನೆಯ ಮೂಲ ಸಂಸ್ಥಾಪಕ ಮಹಾಲಿಂಗೇಶ್ವರ ಭಟ್ ದಿವ್ಯ ಹಸ್ತದಿಂದ ಉದ್ಘಾಟನೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಧರ್ ರೈ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಜನ್ವಿ, ದುತಿ, ಆರ್ವಿ, ಮಾನುಶಿ, ವೈಶ್ವಿ ಕಾರ್ಯಕ್ರಮದ ಮೊದಲಿನ ಅಂಗವಾದ ಪ್ರಾರ್ಥನೆಯನ್ನೂ ನಡೆಸಿ ಮಾಸ್ಟರ್ ಆರ್ಯನ್ ಜೊತೆಗೂಡಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದು ಸಭಿಕರನ್ನು ಮತ್ತಷ್ಟು ಸೆಳೆಯಿತು.
ಮನೋಹರ ರೈ, ಮತ್ತೋರ್ವ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ವಸಂತಿ, ಮಾಲತಿ , ವನಿತಾ ಕುಮಾರಿ ಉಪಸ್ಥಿತರಿದ್ದರು.
ಶಿಕ್ಷಕಿ ಪೂರ್ಣಿ ಕಳೆದ ಶೈಕ್ಷಣಿಕ ವರ್ಷದ ಸಾಧನೆಗಳನ್ನು ಓದಿದರು. ಕಿಂಡರ್‌ಗಾರ್ಡನ್ ಮಕ್ಕಳಿಗೆ ಪದವಿ ಪ್ರಧಾನ ಸಮಾರಂಭವನ್ನೂ ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದರು. ಸ್ಪರ್ಧಾ ವಿಜೇತರಿಗೆ ಪ್ರಶಸ್ತಿಯನ್ನೂ , ಶಾಲಾ ಎಲ್ಲಾ ಮಕ್ಕಳಿಗೆ ಶಾಲೆಯ ಸ್ಮರಣಿಕೆಯನ್ನು ನೀಡಲಾಯಿತು.
ಅತಿಥಿಗಳನ್ನು ಸ್ವಾಗತಿಸಿ ಸಭಾಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಶಿಕ್ಷಕಿ ನಯನಾ ರೈ ನಿರ್ವಹಿಸಿದರು. ಧನ್ಯವಾದ ಸಮರ್ಪಣೆಯನ್ನು ಸತ್ಯಪೂರ್ಣರವರು ಮಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವ ಮಾತಿದೆ. ಆದರೆ ಆ ಮೊಳಕೆಗೆ ಸರಿಯಾದ ಆಹಾರ, ಆರೈಕೆ, ಪೋಷಣೆ ಸಿಕ್ಕರಷ್ಟೇ ಅದು ಉತ್ತಮ ಗಿಡವಾಗಿ ಬೆಳೆಯಲು ಸಾಧ್ಯ. ಪ್ರತಿಭೆ ಬೆಳೆಯುವ ಸಮಯದಲ್ಲಿ ಅದನ್ನು ಪೋಷಿಸಬೇಕು, ಅದಕ್ಕೆ ಬೇಕಾದಂತೆ ಸಹಕಾರ ಕೊಡಬೇಕು. ಆ ನಿಟ್ಟಿನಲ್ಲಿ ಮಕ್ಕಳ ಮನೆ ಯ ಈಗಿನ ಮುಖ್ಯಸ್ಥೆ ಸತ್ಯ ಪೂರ್ಣ ಮತ್ತು ಸಹ ಅಧ್ಯಾಪಿಕೆಯರ ಮುತುವರ್ಜಿ, ಕಾಳಜಿ ಬಹಳ ಶ್ಲಾಘನೀಯ.
























