ನಿಯಂತ್ರಣ ತಪ್ಪಿದ ರಥ ಹರಿದು ಮಹಿಳೆಯ ಕಾಲು ಕಟ್

ಕಲಬುರ್ಗಿ: ಶರಣ ಬಸವೇಶ್ವರ ಜಾತ್ರೆಯ ವೇಳೆ ನಿಯಂತ್ರಣಕ್ಕೆ ಸಿಗದ ರಥ ಮಹಿಳೆಯ ಮೇಲೆ ಹರಿದು ಕಾಲುಗಳು ಕತ್ತರಿಸಿ ಹೋಗಿರುವ ಘಟನೆ ಯಡ್ರಾಮಿ ತಾಲೂಕಿನ ಅರಳಗುಂಡಗಿಯಲ್ಲಿ ನಡೆದಿದೆ.

ಜಾತ್ರಾ ಪ್ರಯುಕ್ತ ನಡೆದ ರಥೋತ್ಸವದ ವೇಳೆ ಈ ದುರ್ಘಟನೆ ನಡೆದಿದೆ. ರಥ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಂದ ಪರಿಣಾಮ ಮಹಿಳೆಯ ಕಾಲಿನ ಮೇಲೆ ಹರಿದಿದೆ. ಘಟನೆಯಲ್ಲಿ ಮಹಿಳೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.

ಕಾಲು ಕಳಕೊಂಡ ಮಹಿಳೆಯನ್ನು ನಾಗಮ್ಮ ಎಂದು ಗುರುತಿಸಲಾಗಿದೆ. ರಥ ನೋಡಲು ನಿಂತುಕೊಂಡಿದ್ದ ಅವರ ಮೇಲೆ ರಥ ಹರಿದಿದೆ. ರಥ ನಿಯಂತ್ರಣ ತಪ್ಪಿ ಕೆಳಕ್ಕೆ ಬಂದ ಪರಿಣಾಮ ಈ ದುರಂತ ನಡೆದಿದೆ. ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.





















































 
 
error: Content is protected !!
Scroll to Top