ಟಿ20 ಚಾಂಪಿಯನ್‌ ಭಾರತ ತಂಡಕ್ಕೆ ಮೋದಿ ಅಭಿನಂದನೆ

ಸೂರ್ಯಕುಮಾರ್‌ ಪಡೆಗೆ ಬರೋಬ್ಬರಿ 27 ಕೋ. ರೂ. ಬಹುಮಾನ ಮೊತ್ತ

ನವದೆಹಲಿ: ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪಂದ್ಯ ಮುಗಿದ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮೋದಿ, ಈ ಗೆಲುವು ಅಸಾಧಾರಣ ಕೌಶಲ, ದೃಢ ನಿಶ್ಚಯ ಮತ್ತು ಟೀಂ ವರ್ಕ್ ಅನ್ನು ಪ್ರತಿಬಿಂಬಿಸುತ್ತದೆ. ಈ ಗೆಲುವಿನಿಂದ ಪ್ರತಿಯೊಬ್ಬ ಭಾರತೀಯನ ಹೃದಯ ಹೆಮ್ಮೆ ಮತ್ತು ಸಂತೋಷದಿಂದ ತುಂಬಿದೆ ಎಂದು ಶ್ಲಾಘಿಸಿದ್ದಾರೆ.

ಆರಂಭದಲ್ಲಿ ಬ್ಯಾಟರ್‌ಗಳ ವಿಸ್ಫೋಟಕ ಬ್ಯಾಟಿಂಗ್ ನಂತರ ಬೌಲರ್‌ಗಳ ಬೆಂಕಿ ಬೌಲಿಂಗ್‌ನಿಂದ ಫೈನಲ್ ಪಂದ್ಯದಲ್ಲಿ ಭಾರತ ಸತತ ಎರಡನೇ ಬಾರಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದೆ. ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳಿಂದ ಗೆದ್ದ ಭಾರತ ಮೂರನೇ ಬಾರಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.





















































 
 

ಭಾರತಕ್ಕೆ ಬರೋಬ್ಬರಿ 27 ಕೋ. ರೂ. ಬಹುಮಾನ

ಟಿ20 ವಿಶ್ವಕಪ್‌ ಜಯಿಸಿದ ಭಾರತಕ್ಕೆ 27 ಕೋಟಿ ರೂ. ನಗದು ಬಹುಮಾನ ಸಿಕ್ಕಿದರೆ ರನ್ನರ್‌ ಅಪ್‌ ಆಗಿರುವ ನ್ಯೂಜಿಲೆಂಡಿಗೆ 14.65 ಕೋಟಿ ರೂ. ನಗದು ಬಹುಮಾನ ಸಿಕ್ಕಿದೆ.

error: Content is protected !!
Scroll to Top