ಅಲ್ಟೋ ಕಾರ್ ಹೊತ್ತುರಿದು ‌ವೃದ್ಧ ಸಜೀವ ದಹನ

ಚಿಕ್ಕಬಳ್ಳಾಪುರ: ಅಲ್ಟೋ ಕಾರೊಂದು ಹೊತ್ತಿ ಉರಿದ ‌ಪರಿಣಾಮ ವೃದ್ಧ ಚಾಲಕ ಸಜೀವ ದಹನವಾದ ಘಟನೆ ಬಾಗೇಪಲ್ಲಿಯ ಆಚೇಪಲ್ಲಿ ಕ್ರಾಸ್ ಬಳಿ ನಡೆದಿದೆ.

ಮೃತನನ್ನು ಪೆನುಮಲೆ ಗ್ರಾಮದ ಉದಯ್ ಕುಮಾರ್ (70) ಎಂದು ಗುರುತಿಸಲಾಗಿದೆ.‌

ಅವರು ನಿನ್ನೆ ರಾತ್ರಿ ಬಾಗೇಪಲ್ಲಿಯಿಂದ ‌ಸ್ವಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿ ಯಾವುದೇ ದೋಷಗಳು, ಅಪಘಾತದ ಕುರುಹುಗಳು ಕಂಡು ಬಂದಿಲ್ಲ. ಆದ್ದರಿಂದ ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಎನ್ನುವ ಅನುಮಾನವೂ ಸೃಷ್ಟಿಯಾಗಿದೆ.





















































 
 

ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top