ಕಾಡಾನೆ ದಾಳಿ ಮಹಿಳೆ ಬಲಿ

ಕುಶಾಲನಗರ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ತ್ಯಾಗತ್ತೂರಿನಲ್ಲಿ ‌ನಡೆದಿದೆ.

ನಂಜರಾಯಪಟ್ಟಣದ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ, ಬಾಳೆಗುಂಡಿ ಗಿರಿಜನ ಹಾಡಿಯ ‌ನಿವಾಸಿ ಜಲಜಾಕ್ಷಿ(53) ಎಂಬವರೇ ಮೃತ ದುರ್ದೈವಿ.

ಸ್ಥಳಕ್ಕೆ ಎಸಿಎಫ್ ಗೋಪಾಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.





















































 
 

error: Content is protected !!
Scroll to Top