ಪತ್ನಿ ಮತ್ತು ಆಕೆಯ ಹೆತ್ತವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ: ಆರೋಪಿ ಬಂಧನ

ಬೆಂಗಳೂರು: ಬೈಕ್ ವಿಷಯಕ್ಕೆ ಪತ್ನಿ, ಅತ್ತೆ ಮತ್ತು ಮಾವನನ್ನು ಪೆಟ್ರೋಲ್ ಹಾಕಿ, ಬೆಂಕಿ ಹಚ್ಚಿ ಕೊಲೆ ಮಾಡಲು ಆಟೋ ಚಾಲಕನೊಬ್ಬ ಯತ್ನಿಸಿದ ಘಟನೆ ಪೀಣ್ಯ ದಾಸರಹಳ್ಳಿಯಲ್ಲಿ ‌ನಡೆದಿದ್ದು, ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಮಹಾಲಕ್ಷ್ಮೀ ಲೇ‌ಔಟ್‌ನ ಪಾಂಡುರಂಗ(32) ಎಂದು ಗುರುತಿಸಲಾಗಿದೆ.

ಪತ್ನಿ ಸುಮಲತಾ, ಆಕೆಯ ತಂದೆ ಶ್ರೀರಾಮ, ತಾಯಿ ಮಂಜುಳಾ ಅವರ ಮೇಲೆ ಆರೋಪಿ ಪಾಂಡುರಂಗ ಕ್ರೌರ್ಯ ಮೆರೆದಿರುವುದಾಗಿದೆ. ಗಾಯಾಳುಗಳು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





















































 
 

ಕೌಟುಂಬಿಕ ಕಲಹದ ಕಾರಣಕ್ಕೆ ಕಳೆದ ಕೆಲ ಸಮಯದಿಂದ ಪತಿ ಮತ್ತು ಪತ್ನಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ಪತ್ನಿ ಸುಮಲತಾ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಇವರಿಬ್ಬರು ಬೇರಾಗಿದ್ದರು.

ಕಳೆದ ಮಾ. 6 ರಂದು ಪಾಂಡುರಂಗ ಪತ್ನಿಯ ತವರು ಮನೆಗೆ ಬಂದು ಆಕೆಗೆ ತಾನು ಕೊಡಿಸಿರುವ ದ್ವಿಚಕ್ರ ವಾಹನ ಮರಳಿ ಕೊಡುವಂತೆ ಹೇಳಿದ್ದಾನೆ. ಆದರೆ ಅದಕ್ಕೆ ಪತ್ನಿ ಮನೆಯವರು ಹಿಂದೇಟು ಹಾಕಿದ್ದಾರೆ. ಆ ವೇಳೆ ಗಲಾಟೆ ತಾರಕಕ್ಕೇರಿದೆ. ಆರೋಪಿ ಪಾಂಡುರಂಗ ಪತ್ನಿ ಮತ್ತು ಅವಳ‌ ಹೆತ್ತವರ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪತಿ ಪಾಂಡುರಂಗ ಕೆಲ ಸಮಯದಿಂದ ಬೇರೊಂದು ಯುವತಿಯ ಜೊತೆ ಸಂಪರ್ಕ ಇಟ್ಟುಕೊಂಡಿದ್ದು, ಅದೇ ಕಾರಣಕ್ಕೆ ಪತ್ನಿ ಸುಮಲತಾ ಆತನಿಂದ ಬೇರಾಗಿ ಹೆತ್ತವರ ಜೊತೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

error: Content is protected !!
Scroll to Top