ದಿ ಕೇರಳ ಸ್ಟೋರಿ 2 ಉಚಿತ ಪ್ರದರ್ಶನ: ವೀಕ್ಷಿಸಿದ ಯುವತಿಯರಿಗೆ ಬಂತು ಬೆದರಿಕೆ ಕರೆ

ಪುತ್ತೂರು: ನಗರದ ಜಿ. ಎಲ್. ಒನ್ ಮಾಲ್‌ನಲ್ಲಿ ಸೀತಾ ಪರಿವಾರ ಸಂಘಟನೆಯ ವತಿಯಿಂದ ‘ದಿ ಕೇರಳ ಸ್ಟೋರಿ 2’ ಚಿತ್ರವನ್ನು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪ್ರದರ್ಶಿಸಲಾಗಿದ್ದು, ಇದರ ಬೆನ್ನಲ್ಲೇ ಈ ವಿಷಯದ ಸುತ್ತ ಹೊಸ ವಿವಾದಗಳು ಸೃಷ್ಟಿಯಾಗಿವೆ.

ಕೆಲವು ರಾಜಕೀಯ ನಾಯಕರು ಈ ಚಿತ್ರದ ಪ್ರದರ್ಶನಕ್ಕೆ ಬೆಂಬಲ ಸೂಚಿಸಿದ್ದರು. ವಿದ್ಯಾರ್ಥಿಗಳು ಸಹ ಚಿತ್ರವನ್ನು ನೋಡಿದ್ದರು. ಅದಾದ ಬಳಿಕ ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ವಿಚಾರಗಳನ್ನು ಕೆಲವು ವಿಘ್ನಸಂತೋಷಿಗಳು ಹರಡಲು ಆರಂಭಿಸಿದ್ದಾರೆ. ಜೊತೆಗೆ ಚಲನಚಿತ್ರದ ಬುಕ್ಕಿಂಗ್‌ಗಾಗಿ ನೀಡಲಾಗಿದ್ದ ಮಹಿಳೆಯರ ಮೊಬೈಲ್‌ಗಳಿಗೆ ಬೆದರಿಕೆ ಕರೆಗಳು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರೆಗಳು ಬಂದಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿವೆ. ಈ ಕರೆಗಳು ವಿದೇಶಗಳಿಂದ ಬಂದಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಹಾಗೆಯೇ ಮುಸ್ಲಿಂ ಸಮುದಾಯದ ಯುವತಿಯರು ‌ಮಾಲ್‌ಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು ಎಂದು ಸಂದೇಶಗಳು ಹರಿದಾಡುತ್ತಿರುವ ಬಗ್ಗೆಯೂ ವರದಿಯಾಗಿದೆ.





















































 
 

ಘಟನೆಯ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯಲ್ಲೂ ಎಚ್ಚರಿಕೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top