ಮಾ. 8: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಹತ್ತೂರೊಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಮಾ. 8 ರಂದು ಬಿಡುಗಡೆ ಮಾಡಲಿದ್ದಾರೆ.

ಮಹಾಲಿಂಗೇಶ್ವರ ದೇಗುಲದಲ್ಲಿ ಮಾ. 8 ರಂದು 11 ಗಂಟೆಗೆ ದೇಗುಲದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ.

ಎ. 1 ರಂದು ಜಾತ್ರಾ ಪ್ರಯುಕ್ತ ಗೊನೆ ‌ಮುಹೂರ್ತ ನಡೆಯಲಿದ್ದು, ಎ. 19 ರ ವರೆಗೆ ಪುತ್ತೂರು ಜಾತ್ರೆ ಬಹಳಷ್ಟು ವೈಭವದಿಂದ ನಡೆಯಲಿದೆ. ಪ್ರಧಾನ ವಿಧಿ ವಿಧಾನಗಳು ಎ. 10 ರಿಂದ ತೊಡಗಲಿದ್ದು, ಎ. 17 ರಂದು ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರನ ಬ್ರಹ್ಮರಥೋತ್ಸವ ನಡೆಯಲಿದೆ. ಎ. 18 ರಂದು ದೇವರ ಅವಭೃತ ಸ್ನಾನದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.





















































 
 

error: Content is protected !!
Scroll to Top