ಡ್ರಿಂಕ್ ಆ್ಯಂಡ್ ಡ್ರೈವ್ ಕಡಿಮೆ ಮಾಡಲು ಬೆಳಗಾವಿ ಪೊಲೀಸರಿಂದ ಮಾದರಿ ಕ್ರಮ

ಬೆಳಗಾವಿ: ಕಾರುಗಳನ್ನನೇ ಬಾರುಗಳನ್ನಾಗಿ ಮಾಡಿಕೊಂಡು ಮಜಾ ಮಾಡುವವರಿಗೆ ಬೆಳಗಾವಿಯ ಪೊಲೀಸರು ಶಾಕ್ ನೀಡಿದ್ದಾರೆ‌.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರಿನಲ್ಲಿ ಕುಳಿತು ಮದ್ಯಪಾನ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ನಗರಕ್ಕೆ ಮಾತ್ರವೇ ಸಂಬಂಧಿಸಿದ ಹಾಗೆ ಸುಮಾರು 24 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 24 ಪ್ರಕರಣಗಳಲ್ಲಿ 36 ಜನರ ಮೇಲೆ ಕೇಸು ಜಡಿದಿದ್ದಾರೆ.

ಕಾರಿನಲ್ಲಿ ಕುಳಿತು ಪಾರ್ಟಿ ಮಾಡುವವರಿಗೆ, ರಾತ್ರಿ ಸಮಯದಲ್ಲಿ ಕಾರುಗಳಲ್ಲಿ ಮದ್ಯ ಸೇವಿಸಿ ಮೋಜು ಮಾಡುವವರಿಗೆ ತಪಾಸಣೆಗೆ ಒಳಪಡಿಸಲಾಗಿದೆ. ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ಕಡಿಮೆ ಮಾಡಿಸುವ ಸದುದ್ದೇಶದಿಂದ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.





















































 
 
error: Content is protected !!
Scroll to Top