ಮಧ್ಯಪ್ರಾಚ್ಯ ಬಿಕ್ಕಟ್ಟು: ದುಬೈನಲ್ಲಿ ‌ಸಿಲುಕಿದ್ದ 50 ಮಂದಿ ಕನ್ನಡಿಗರು ಮರಳಿ ತಾಯ್ನೆಲಕ್ಕೆ

ಬೆಂಗಳೂರು: ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಕಾರಣವಾದ ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಕಾರಣದಿಂದ ದುಬೈ‌ನಲ್ಲಿ ‌ಸಿಲುಕಿ ಸಂಕಷ್ಟದಲ್ಲಿದ್ದ 50 ಮಂದಿ ಕನ್ನಡಿಗರು ಶಾಸಕ ಬಿ. ನಾಗೇಂದ್ರ ಅವರ ಸಹಕಾರದಿಂದ ಮತ್ತೆ ತಾಯ್ನಾಡಿಗೆ ಮರಳುವಂತಾಗಿದೆ.

ಬಳ್ಳಾರಿಯ 35 ಮಂದಿ , ಚಿತ್ರದುರ್ಗದ 15 ಜನರು ಸೇರಿ 246 ಮಂದಿ ಕನ್ನಡಿಗರು ಮಾ. 4 ರಂದು ಶಾರ್ಜಾದಿಂದ ಕೊಚ್ಚಿನ್‌ಗೆ ಬಂದಿಳಿದಿದ್ದರು. ರಾಜ್ಯದ 50 ಜನರಿಗೆ ಅಲ್ಲಿಂದ ಬೆಂಗಳೂರಿಗೆ ಬರಲು ನಾಗೇಂದ್ರ ಅವರು ವಿಮಾನದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಬೆಂಗಳೂರಿಗೆ ಅವರೆಲ್ಲರೂ ಇಂದು ಬೆಳಗ್ಗೆ ಬಂದು ತಲುಪಿದ್ದಾರೆ.

ದುಬೈನಿಂದ ‌ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಕನ್ನಡಿಗರು, ನಾಗೇಂದ್ರ ಅವರಿಗೂ ಧನ್ಯವಾದ ತಿಳಿಸಿದ್ದಾರೆ.





















































 
 
error: Content is protected !!
Scroll to Top