ಬೀದರ್: ಅನ್ಯ ಕೋಮಿನ ವ್ಯಕ್ತಿಗಳು ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 49 ಜನರ ಮೇಲೆ ಪ್ರಕರಣ ದಾಖಲಾಗಿದ್ದು ಅವರಲ್ಲಿ 10 ಮಂದಿಯನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ನಡೆದಾಗ ಬಸವ ಕಲ್ಯಾಣ ಪೊಲೀಸ್ ಠಾಣೆಯ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ್ದು, ಘಟನೆ ಎಷ್ಟು ಭೀಕರತೆಯಿಂದ ಕೂಡಿದೆ ಎಂಬುದಕ್ಕೆ ಸಾಕ್ಷ್ಯ ಹೇಳುವಂತಿತ್ತು. ಕಲ್ಲು ತೂರಾಟದ ಕಾರಣಕ್ಕೆ ಪೊಲೀಸ್ ವಾಹನ ಸಹ ಹಾನಿಗೊಳಗಾಗಿದೆ.
ಅಕ್ರಮ ಆಸ್ತಿ ಪಾಸ್ತಿ ಹಾಗೂ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ 49 ಆರೋಪಿಗಳ ಪೈಕಿ ಸೆರೆಯಾದ 20 ಆರೋಪಿಗಳನ್ನು ತೀವ್ರ ವಿಚಾರಣೆಗೂ ಒಳಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಜೊತೆಗೆ ಘಟನೆಯ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸಹ ನಡೆಯುತ್ತಿದೆ.
ಹಾಗೆಯೇ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ.
























