ಇರಾನ್‌ ಯುದ್ಧನೌಕೆಯನ್ನು ಮುಳುಗಿಸಿದ ಅಮೆರಿಕ : 80ಕ್ಕೂ ಅಧಿಕ ಮಂದಿ ಸಾವು

ಭಾರತದಲ್ಲಿ ಸಮರಾಭ್ಯಾಸ ಮಾಡಿ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಜಲಾಂತರ್ಗಾಮಿಯಿಂದ ದಾಳಿ

ವಾಷಿಂಗ್ಟನ್‌ : ಶ್ರೀಲಂಕಾದ ಕರಾವಳಿ ಸಮೀಪ ಇರಾನ್​ ಯುದ್ಧನೌಕೆಯನ್ನು ಮುಳುಗಿಸಿದ್ದು ನಾವೇ ಎಂದು ಅಮೆರಿಕ ಹೇಳಿಕೊಂಡಿದೆ. ಜಲಾಂತರ್ಗಾಮಿಯ ಮೂಲಕ ನೌಕಾ ಸ್ಫೋಟಕ ಬಳಸಿ ಹೊಡೆದು ಮುಳುಗಿಸಿದ್ದೇವೆ. ಅಂತಾರಾಷ್ಟ್ರೀಯ ಜಲ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನ್‌ನ ಐಆರ್​ಐಎಸ್ ದೇನಾವನ್ನು ಹಿಂದೂ ಮಹಾಸಾಗರದಲ್ಲಿ ಮುಳುಗಿಸಿದ್ದೇವೆ ಎಂದು ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಹೇಳಿಕೊಂಡು ಯುದ್ಧನೌಕೆಯನ್ನು ಹೊಡೆದುರುಳಿಸಿ ಮುಳುಗಿಸಿದ ಕಾರ್ಯಾಚರಣೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ನಡೆಸಿದ ದಾಳಿಗೆ ಇರಾನ್ ಯುದ್ಧನೌಕೆ ಮುಳುಗಿ 87 ಜನರು ಸಾವನ್ನಪ್ಪಿದ್ದಾರೆ.
ಐರಿಸ್ ದೇನಾ ಎಂಬ ಯುದ್ಧನೌಕೆ ಕೆಲವೇ ವಾರಗಳ ಹಿಂದೆ ಭಾರತದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು. ಮೌಡ್ಜ್ ಕ್ಲಾಸ್ ಫ್ರಿಗೇಟ್ ಆಗಿರುವ ಐರಿಸ್ ದೇನಾ 2026ರಲ್ಲಿ ಭಾರತಕ್ಕೆ ಬಂದಿದ್ದು, ಬಹುಪಕ್ಷೀಯ ನೌಕಾ ಅಭ್ಯಾಸ ಮಿಲನ್‌ನಲ್ಲಿ ಭಾಗವಹಿಸಿತ್ತು.





















































 
 

ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಜಲಾಂತರ್ಗಾಮಿ ದಾಳಿಯನ್ನು ದೃಢಪಡಿಸಿದ್ದಾರೆ. ಅಂತಾರಾಷ್ಟ್ರೀಯ ನೀರಿನಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನಿನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಹೊಡೆದು ಮುಳುಗಿಸಿತು ಎಂದು ಹೆಗ್ಸೆತ್ ತಿಳಿಸಿದ್ದಾರೆ.

ಶ್ರೀಲಂಕಾ ಕರಾವಳಿಯಿಂದ ಸುಮಾರು 40 ನಾಟಿಕಲ್‌ ಮೈಲು ದೂರದಲ್ಲಿರುವಾಗ ಈ ಯುದ್ಧನೌಕೆಯಿಂದ ಆಪತ್ತಿನ ಕರೆ ಬಂದಿತ್ತು. ಅಮೆರಿಕೆ ಜಲಾಂತರ್ಗಾಮಿ ದಾಳಿಯಾಗುವಾಗ ನೌಕೆಯಲ್ಲಿ ಸುಮಾರು 180 ಮಂದಿ ಇದ್ದರು. ಈ ಪೈಕಿ ಈಗ 87 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. 30ಕ್ಕೂ ಹೆಚ್ಚು ಮಂದಿಯನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದೆ. ನೌಕೆ ಪೂರ್ಣವಾಗಿ ಮುಳುಗಿದ್ದರೂ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

error: Content is protected !!
Scroll to Top