ನದಿಯಲ್ಲಿ ತೇಲಿ ಬಂತು ರಾಶಿ ರಾಶಿ ಆಧಾರ್‌ ಕಾರ್ಡ್‌!

ನಾನಾ ರೀತಿಯ ಅನುಮಾನಗಳಿಗೆ ಕಾರಣವಾದ ನದಿಯಲ್ಲಿ ಸಿಕ್ಕಿದ ಆಧಾರ್‌

ಬಂಟ್ವಾಳ: ರಾಶಿ ರಾಶಿ ಆಧಾರ್‌ ಕಾರ್ಡ್‌ ನೇತ್ರಾವತಿ ನದಿಯಲ್ಲಿ ತೇಲಿ ಬಂದು ಬಂಟ್ವಾಳದ ಫರಂಗಿಪೇಟೆ ಸಮೀಪ ದಡಕ್ಕೆ ಬಿದ್ದಿರುವದು ಕಂಡು ಬಂದಿದ್ದು, ಈ ವಿದ್ಯಮಾನ ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ.

ಹೆಚ್ಚಿನೆಲ್ಲ ಆಧಾರ್‌ ಕಾರ್ಡ್‌ಗಳು ಪುದು ಗ್ರಾಮದ ನಿವಾಸಿಗಳ ವಿಳಾಸಗಳನ್ನು ಹೊಂದಿವೆ. ಯಾರು, ಯಾಕಾಗಿ ಈ ಆಧಾರ್‌ ಕಾರ್ಡ್‌ಗಳನ್ನು ನದಿಗೆ ಎಸೆದಿದ್ದಾರೆ ಎಂಬ ಅನುಮಾನ ಉಂಟಾಗಿದೆ.





















































 
 

ಮಂಗಳವಾರ ಸಂಜೆ ಹೊತ್ತು ನದಿ ದಡದಲ್ಲಿ ರಾಶಿ ರಾಶಿ ಅಧಾರ್‌ ಕಾರ್ಡ್‌ ನದಿ ದಡದ ಪಕ್ಕ ತೇಳುತ್ತಿರುವುದನ್ನು ಸ್ಥಳೀಯ ನಿವಾಸಿಯೊಬ್ಬರು ನೋಡಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತ್‌ ಅಧ್ಯಕ್ಷರು ಇತರರ ಜೊತೆಗೆ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆಧಾರ್‌ ಕಾರ್ಡ್‌ಗಳು ಪುದು ಗ್ರಾಮಸ್ಥರದ್ದು ಎಂದು ಗೊತ್ತಾಗಿದೆ.

ಅಂಚೆಯಲ್ಲಿ ಬಂದ ಆಧಾರ್‌ ಕಾರ್ಡ್‌ಗಳನ್ನು ವಿತರಿಸದೆ ನದಿಗೆ ಎಸೆದಿದ್ದಾರೆಯೇ ಎಂಬ ಅನುಮಾನವೂ ಉಂಟಾಗಿದೆ. ಈಗ ಜನರೇ ಸೈಬರ್‌ ಸೆಂಟರ್‌ಗಳಲ್ಲಿ ಆಧಾರ್‌ ಕಾರ್ಡ್‌ ಮಾಡಿಸಲು ಅವಕಾಶವಿದೆ. ವಿಳಾಸ ಬದಲಾವಣೆ, ತಪ್ಪುಗಳು ಸರಿಪಡಿಸುವಿಕೆ ಎಂದು ನಿತ್ಯವೂ ಆಧಾರ್‌ ಕಾರ್ಡ್‌ ಕೆಲಸದ ಆಗುತ್ತಿರುತ್ತದೆ. ಆದರೆ ಒಮ್ಮೆಲೆ ರಾಶಿ ರಾಶಿ ಆಧಾರ್‌ ಕಾರ್ಡ್‌ ಹೇಗೆ ಬಂತು ಎಂಬ ಪ್ರಶ್ನೆ ಮಾತ್ರ ಕಗ್ಗಂಟಾಗಿ ಉಳಿದಿದೆ.
ಆಧಾರ್‌ ಕಾರ್ಡ್‌ಗಳನ್ನು ನದಿಗೆ ಎಸೆದವರು ಯಾರು ಎಂಬುದರ ಬಗ್ಗೆ ತನಿಖೆ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!
Scroll to Top