ಮಧ್ಯಪ್ರಾಚ್ಯದ ಎಂಟು ರಾಷ್ಟ್ರಗಳ ಜೊತೆ ಪ್ರಧಾನಿ ಮೋದಿ ಮಾತು: ಭಾರತೀಯರ ಸುರಕ್ಷತೆಯ ಬಗ್ಗೆ ಚರ್ಚೆ

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಬಿಗಡಾಯಿಸುತ್ತಿರುವ ಹಿನ್ನೆಲೆ ಭಾರತದ ಪ್ರಧಾನಿ ಮೋದಿ ಅವರು ಒಮಾನ್, ಕತಾರ್, ಕುವೈಟ್ ಸೇರಿದಂತೆ ಎಂಟು ರಾಷ್ಟ್ರಗಳ ಜೊತೆಗೆ ಮಾತುಕತೆ ಮಾಡಿದ್ದಾರೆ.

ಆ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ವಿಚಾರಿಸಿರುವ ಅವರು, ಇರಾನ್ ನಡೆಸುತ್ತಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇರಾನ್‌ನ ಪ್ರತೀಕಾರದ ದಾಳಿಗೆ ತುತ್ತಾಗಿರುವ ಒಮಾನ್‌ನ ಸುಲ್ತಾನ ಹೈತಮ್ ಬಿನ್ ತಾರಿಕ್, ಕುವೈತ್ ರಾಜಕುಮಾರ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್ -ಸಬಾಹ್ ಮತ್ತು ಕತಾರ್‌ನ ಅಮೀರ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಇರಾನ್‌ ದಾಳಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.





















































 
 

ಈ ವೇಳೆ 3 ರಾಷ್ಟ್ರಗಳ ಸಾರ್ವಭೌಮತ್ವದ ಉಲ್ಲಂಘನೆಯನ್ನು ಸಹ ಅವರು ವಿರೋಧಿಸಿದ್ದಾರೆ. ಅಲ್ಲಿ ನಾನಾ ಕಾರಣಗಳಿಂದ ವಾಸ್ತವ್ಯ ಹೂಡಿರುವ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಚರ್ಚಿಸಿದ್ದಾರೆ. ಕಳೆದ 2 ದಿನಗಳಲ್ಲಿ ಮೋದಿ, ಇಸ್ರೇಲ್, ಬಹ್ರೇನ್‌, ಸೌದಿ ಅರೇಬಿಯಾ ಸೇರಿ 8 ರಾಷ್ಟ್ರಗಳ ಮುಖ್ಯಸ್ಥರಿಗೆ ಕರೆ ಮಾಡಿ ಮಾತಾಡಿದ್ದಾರೆ.

error: Content is protected !!
Scroll to Top