ಪವಿತ್ರಾ ಗೌಡಗಿಲ್ಲ ಮನೆಯೂಟ: ಹೈಕೋರ್ಟ್

ಬೆಂಗಳೂರು: ಮನೆಯೂಟದ ‌ವಿಚಾರದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ‌ಕೊಲೆ‌ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತು ಇನ್ನಿಬ್ಬರು ಆರೋಪಿಗಳಿಗೆ ಹಿನ್ನಡೆಯಾಗಿದೆ.

ಇತ್ತೀಚೆಗೆ ಪವಿತ್ರಾ ‌ಗೌಡ‌ಗೆ ಜೈಲಿನಲ್ಲಿ ಮನೆಯೂಟ ‌ನೀಡಲು ಅವಕಾಶ ಕಲ್ಪಿಸುವಂತೆ ಅವರ ಪರ ವಾಸಿಸುತ್ತಿರುವ ವಕೀಲರು ಸೆಶನ್ಸ್ ‌ಕೋರ್ಟ್‌ಗೆ ಮನವಿ ಮಾಡಿದ್ದರು. ಪವಿತ್ರಾ ಅವರಂತೆಯೇ ಆರೋಪಿಗಳಾದ ನಾಗ ರಾಜು ಮತ್ತು ಲಕ್ಷ್ಮಣ್ ಸಹ ಮನೆಯೂಟ ನೀಡುವಂತೆ ಕೋರ್ಟ್‌ಗೆ ‌ಮನವಿ ಸಲ್ಲಿಸಿದ್ದರು.

ಸೆಶನ್ಸ್ ಕೋರ್ಟ್ ದಿನಕ್ಕೊಮ್ಮೆ ‌ಮನೆಯೂಟ ನೀಡುವ ಆದೇಶವನ್ನು ಆರಂಭದಲ್ಲಿ ನೀಡಿತ್ತು. ಬಳಿಕ ಆದೇಶವನ್ನು ಮಾರ್ಪಾಡು ಮಾಡಿ ವಾರಕ್ಕೊಮ್ಮೆ ಮನೆಯೂಟ ನೀಡುವಂತೆ ಸೂಚಿಸಿತ್ತು.





















































 
 

ಆದರೆ ಜೈಲಧಿಕಾರಿಗಳು ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸೆಶನ್ಸ್ ಕೋರ್ಟ್‌ನ ಆದೇಶವನ್ನು ರದ್ದು ಮಾಡಿದೆ. ಮನೆಯೂಟಕ್ಕಾಗಿ ‌ಸಲ್ಲಿಕೆ ಮಾಡಲಾಗಿದ್ದ ಮೂವರೂ ಆರೋಪಿಗಳ ಅರ್ಜಿಯನ್ನು ವಜಾ ಮಾಡಿದೆ.

ಹಾಗೆಯೇ ಖೈದಿ ಬಯಸಿದ ಕೂಡಲೇ ಮನೆ‌ಯೂಟ ನೀಡಲು ಅವಕಾಶ ಇಲ್ಲ. ವೈದ್ಯಕೀಯ ಸಮಸ್ಯೆಯ ಸಂದರ್ಭದಲ್ಲಿ ಮಾತ್ರ ಇಂತಹ ಮನವಿಯನ್ನು ಪುರಸ್ಕರಿಸಬಹುದು ಎಂಬ ಅಭಿಪ್ರಾಯವನ್ನು ತಿಳಿಸಿದೆ.

error: Content is protected !!
Scroll to Top