ಬಾಲಕಿ ಮೇಲೆ ಅತ್ಯಾಚಾರ: ಒಂದೇ ದಿನದಲ್ಲಿ ಆರೋಪಿ ಬಂಧನ

ತುಮಕೂರು: ವಿಳಾಸ ಕೇಳಿಕೊಂಡು ಬಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿರುವ‌ ಘಟನೆ ಗುಬ್ಬಿ ಗ್ರಾಮದಲ್ಲಿ ನಡೆದಿದೆ.

ಶನಿವಾರದಂದು ಶಾಲೆಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಬಾಲಕಿಯ ‌ಬಳಿ ಆರೋಪಿ ವಿಳಾಸ ಕೇಳಿದ್ದಾನೆ. ಆಕೆ ಆತ ಹೇಳಿದ ವಿಳಾಸದ ರಸ್ತೆ ತೋರಿಸಲು ಹೋಗಿದ್ದಾಳೆ. ಈ ಸಮಯ ನಿರ್ಜನ ಪ್ರದೇಶವೊಂದರಲ್ಲಿ ಆಕೆಯ ಮೇಲೆ ಕಾಮುಕ ಅತ್ಯಾಚಾರ ನಡೆಸಿರುವುದಾಗಿದೆ.

ಬಾಲಕಿ ಮನೆಗೆ ಓಡಿ ಹೋಗಿ ಈ ಸಂಗತಿಯನ್ನು ತಿಳಿಸಿದ್ದಾಳೆ. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





















































 
 

ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ.

error: Content is protected !!
Scroll to Top