ಮಂಗಳೂರು: ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ ಘಟನೆ ನಡೆದಿದೆ.
ಆತ್ಮಹತ್ಯಾ ಪಾಯಿಂಟ್ ಎಂದೇ ಗುರುತಿಸಲಾಗಿದೆ. ಸೇತುವೆಯ ತಡೆಬೇಲಿಗೆ ವಾಹನವೊಂದು ಗುದ್ದಿದ ಪರಿಣಾಮ ಹಾನಿಯಾಗಿ ಕೆಲವು ದಿನಗಳಾಗಿದೆ. ಇಲ್ಲಿಂದಲೇ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದಾಗಿ ತಿಳಿದು ಬಂದಿದೆ.
ಅವರನ್ನು ಸಮೀಪದಲ್ಲೇ ಇದ್ದ ಮೀನುಗಾರರು ರಕ್ಷಿಸಿದ್ದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ನಾಗುರಿ ಪ್ರದೇಶದವರಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
























