ಮಡಿಕೇರಿ: ಕಾಡಾನೆಯ ದಾಳಿಗೆ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಘಟನೆ ಬೆಟ್ಟತ್ತೂರಿನಲ್ಲಿ ನಡೆದಿದೆ.
ಪೂಜಾ(17) ಎಂಬಾಕೆಯೇ ಮೃತ ದುರ್ದೈವಿ. ಮಡಿಕೇರಿಯ ಸಂತ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದಳು ಎಂದು ತಿಳಿದು ಬಂದಿದೆ.
ಫೆ. 28 ರಂದು ಕಾಲೇಜು ಮುಗಿಸಿ ಬೆಟ್ಟತ್ತೂರಿನ ತನ್ನ ಮನೆಯ ಸಮೀಪ ಬಸ್ಸಿನಿಂದ ಇಳಿದಿದ್ದಳು. ಆ ಬಳಿಕ ಆಕೆಯನ್ನು ಕಾಡಾನೆ ದಾಳಿ ನಡೆಸಿ ಕೊಂದಿದೆ ಎಂದು ಹೇಳಲಾಗಿದೆ.
ಪ್ರಕರಣ ನಡೆದ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಅವರು ತಮ್ಮ ಕೋಪ ಹೊರಹಾಕಿದ್ದಾರೆ.
























