ಸಾಗರ: ಬುರ್ಖಾ ಧರಿಸಿ ಪ್ರೇಯಸಿಯನ್ನು ಕಾಣಲು ಬಂದ ಅಪ್ರಾಪ್ತ ಯುವಕನನ್ನು ಕಂಡು ಅನುಮಾನಗೊಂಡ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜನ್ನತ್ ನಗರದಲ್ಲಿ ನಡೆದಿದೆ.
ತ್ಯಾಗರ್ತಿಯ ಯುವಕ ತನ್ನ ಪ್ರೇಮಿಯನ್ನು ಕಾಣಲು ಬುರ್ಖಾ ಧರಿಸಿ ಬಂದಿದ್ದ. ಆದರೆ ಈತನ ನಡೆ ಕಂಡ ಸ್ಥಳೀಯರು ಈತ ಮಕ್ಕಳ ಕಳ್ಳ ಆಗಿರಬೇಕು ಎಂದು ತಿಳಿದು, ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ವಿಚಾರಣೆ ವೇಳೆಗೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಒಟ್ಟಿನಲ್ಲಿ ರಹಸ್ಯವಾಗಿ ಪ್ರೇಯಸಿಯ ಭೇಟಿಗೆ ಬಂದು, ಪೊಲೀಸರ ವಶಕ್ಕೆ ಯುವಕ ಬಿದ್ದಿದ್ದಾನೆ. ತೀವ್ರ ವಿಚಾರಣೆಯ ಬಳಿಕ ಈತ ಕಳ್ಳನಲ್ಲ ಎಂಬ ಸತ್ಯ ತಿಳಿದು ಬಂದಿದೆ.
























