ಮಂಗಳವಾರ ಚಂದ್ರ ಗ್ರಹಣ : ದೇವಸ್ಥಾನಗಳಲ್ಲಿ ಪೂಜೆ, ದರ್ಶನ ಸಮಯ ಬದಲಾವಣೆ

ಭಾರತದಲ್ಲಿ ಕೇವಲ 25 ನಿಮಿಷ ಗ್ರಹಣ ಗೋಚರ

ಬೆಂಗಳೂರು: ಯುಗಾದಿಗೂ ಮುನ್ನ ಕೇತುಗ್ರಸ್ತ ಚಂದ್ರಗ್ರಹಣ ಮಂಗಳವಾರ (ಮಾ.3) ಗೋಚರಿಸಲಿದೆ. ಗ್ರಹಣದ 6 ಗಂಟೆ ಮುಂಚೆಯೇ ಸೂತಕದ ಛಾಯೆ ಆವರಿಸಲಿದೆ. ಹೀಗಾಗಿ ಅಂದು ರಾಜ್ಯದ ವಿವಿಧ ದೇವಾಲಯಗಳಲ್ಲಿ ಪೂಜೆ, ದರ್ಶನದ ಸಮಯ ಬದಲಾಗಿದೆ.

ಹೋಳಿ ಹಬ್ಬದಂದೇ ಚಂದ್ರಗ್ರಹಣವೂ ಇರುವುದು ಈ ಸಲದ ವಿಶೇಷ. ಭಾರತೀಯ ಸಂಸ್ಕೃತಿಯಲ್ಲಿ ಬಣ್ಣಗಳ ಹಬ್ಬ ಹೋಳಿಗೆ ವಿಶೇಷ ಮಹತ್ವವಿದೆ. 2026ರ ಹೋಳಿ ಹಬ್ಬವು ಕೇವಲ ಸಂಭ್ರಮಕ್ಕೆ ಮಾತ್ರವಲ್ಲದೆ, ಖಗೋಳ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಅತ್ಯಂತ ಕುತೂಹಲಕಾರಿಯಾಗಿದೆ. ಈ ದಿನದಂದೇ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ.





















































 
 

ಮಾರ್ಚ್ 3ರಂದು ಮಧ್ಯಾಹ್ನ 3.20ಕ್ಕೆ ಚಂದ್ರನಿಗೆ ಗ್ರಹಣ ಹಿಡಿಯಲು ಆರಂಭವಾಗುತ್ತದೆ. ಸಂಜೆ 6.47ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಚಂದ್ರಗ್ರಹಣದ ಅವಧಿ 3 ಗಂಟೆ 27 ನಿಮಿಷಗಳಷ್ಟು ಸುದೀರ್ಘವಾಗಿರುತ್ತದೆ. ಒಟ್ಟು ಚಂದ್ರಗ್ರಹಣ ಸಂಜೆ 4.34ಕ್ಕೆ ಪ್ರಾರಂಭವಾಗುತ್ತದೆ. ಭಾರತದಲ್ಲೂ ಚಂದ್ರಗ್ರಹಣ ಗೋಚರಿಸುತ್ತದೆ. ಆ ದಿನ ಸಂಜೆ 6.22ಗಂಟೆಗೆ ಚಂದ್ರ ಗ್ರಹಣವನ್ನು ನೋಡಬಹುದಾಗಿದೆ. ಹುಣ್ಣಿಮೆ ಬೆಳದಿಂಗಳಲ್ಲಿ ಗೋಚರಿಸಲಿದೆ. ಸಂಜೆ 6.47ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದ ಪ್ರಕಾರ, ಭಾರತದಲ್ಲಿ ಚಂದ್ರಗ್ರಹಣವು ಕಡಿಮೆ ಸಮಯದವರೆಗೆ ಗೋಚರಿಸುತ್ತದೆ. ಒಟ್ಟು 25 ನಿಮಿಷಗಳಷ್ಟು ಕಾಲ ಚಂದ್ರನಿಗೆ ಗ್ರಹಣ ಹಿಡಿದಿರುವುದನ್ನು ಭಾರತೀಯರು ನೋಡಬಹುದಾಗಿದೆ. ಇದರಿಂದಾಗಿ ದೇಶದ ವಿವಿಧ ಕಡೆಗಳಲ್ಲಿ ಚಂದ್ರೋದಯದ ಸಮಯದಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದೆ.

error: Content is protected !!
Scroll to Top