ಬಂಟ್ವಾಳ: ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಗೋ ಸಾಗಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಹಿಂಸಾತ್ಮಕ ರೀತಿಯಲ್ಲಿ ಎರಡು ದನಗಳನ್ನು ತುಂಬಿದ್ದ ವಾಹನವೊಂದು ರಸ್ತೆ ಬದಿ ಪತ್ತೆಯಾಗಿದೆ.
ವಾಹನದ ಚಾಲಕ ಮಂಡ್ಯ ಜಿಲ್ಲೆಯ ನವೀನ್ ಮತ್ತು ಚೇತನ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದು, ಆ ಗೋವುಗಳನ್ನು ಚೆನ್ನರಾಯಪಟ್ಟಣದ ಶಂಕರ್ ಎಂಬಾತ ಸಾಲೆತ್ತೂರಿನ ಶಾಫಿಗೆ ಮಾರಾಟ ಮಾಡಿದ್ದಾಗಿಯೂ, ಅವರಗಳನ್ನು ಮಾಂಸ ಮಾರಾಟದ ಉದ್ದೇಶದಿಂದ ಮಾರಿರುವುದಾಗಿಯೂ ಮಾಹಿತಿ ನೀಡಿದ್ದಾರೆ. ಹಾಗೆಯೇ ಗೋವುಗಳ ಸಾಗಾಟಕ್ಕೆ ಬೇರೆಯವರ ಹೆಸರಿನಲ್ಲಿ ದಾಖಲಾತಿ ಪಡೆದಿರುವ ಅಂಶವೂ ಬಯಲಾಗಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
























