ಕಾರು – ಬೈಕ್ ಢಿಕ್ಕಿ: ದಂಪತಿ ಸ್ಥಳದಲ್ಲೇ ಸಾವು

ಹುಣಸೂರು: ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಾರಾಯಣಪುರದ ಬಳಿ ನಡೆದಿದೆ.

ಬೀರನಹಳ್ಳಿಯ ನಂಜುಂಡಸ್ವಾಮಿ(52) ಮತ್ತು ನೇತ್ರಾವತಿ(46) ಎಂಬವರೇ ಮೃತ ದುರ್ದೈವಿಗಳು. ಈ ದಂಪತಿ ಸಂಬಂಧಿಕರ ಸಾವಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ‌. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಕಾರು ಢಿಕ್ಕಿಯಾದ ರಭಸಕ್ಕೆ ದಂಪತಿಯ ತಲೆ, ಕೈ ಕಾಲುಗಳಿಗೆ ‌ಗಂಭೀರ ಪ್ರಮಾಣದ ಗಾಯಗಳಾಗಿ ಅವರು ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ.





















































 
 

ಕೆ. ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top