ಅಕ್ಷಯ ಕಾಲೇಜಿನ ವಾರ್ಷಿಕ ಶಿಬಿರ 2025-26 :ಸೇವಾ ಪುರಸ್ಕಾರ ಪ್ರದಾನ

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇದರ ನೇತೃತ್ವದಲ್ಲಿ ನನ್ನ ಭಾರತಕ್ಕಾಗಿ ಯುವಜನತೆ ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ವಾರ್ಷಿಕ ವಿಶೇಷ ಶಿಬಿರ 2025-26 ರಂದು ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯ ನಗರ ಪೆರ್ನೆ ಇಲ್ಲಿ ನೆರವೇರಿತು.

ಅಧ್ಯಕ್ಷತೆಯನ್ನು ನವೀನ್ ಪದಬರಿ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಪೆರ್ನೆ ಇವರು ವೇದಿಕೆಯನ್ನು ಅಲಂಕರಿಸಿ ಶಿಬಿರಾರ್ಥಿಗಳನ್ನು ಹಾಗೂ ಸಭೆಯನ್ನು ಕುರಿತು ಎರಡು ಸಾಲು ಪದ್ಯದ ಮೂಲಕ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಉಮ್ಮಪ್ಪ ಪೂಜಾರಿ ಪಿ. (ನಿವೃತ್ತ ಡೀನ್ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳು ಮಂಗಳೂರು) ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಇಂದಿನ ಈ ದಿನದಲ್ಲಿ ಬೃಹತ್ ಸಂಸ್ಥೆಯಾದ ಅಕ್ಷಯ ಕಾಲೇಜು ನಮ್ಮ ಪರಿಸರ ಆಯ್ಕೆ ಮಾಡಿ ಈ ಸಂಸ್ಥೆಯ ಬೆಳವಣಿಗೆಯನ್ನು ಕಾಣಲು ಈ ಶಿಬಿರವು ಸುಂದರ ದಾರಿ ಮಾಡಿಕೊಡುತ್ತಿದೆ ಎಂದು ಪ್ರಶಂಶಿಸಿದರು.





















































 
 

ಇನ್ನೊಬ್ಬ ಅತಿಥಿ ಗಂಗಾಧರ್ ರೈ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ನಿಸರ್ಗ ವಡ್ಯದಗಯ ಪೆರ್ನೆ ಮಾತನಾಡಿ, ದಾಟಿ ಬಂದ ದೋಣಿ ಮತ್ತು ಏರಿ ಬಂದ ಏಣಿಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು ಹಾಗೂ ಶಿಬಿರಾರ್ಥಿಗಳ ಹುಮ್ಮಸ್ಸನ್ನು ಹೊಗಳಿದರು.

ಮತ್ತೊಬ್ಬ ಅತಿಥಿ ಶಿವರಾಜ್ ಪಿ. ಆರ್. (ಅಧ್ಯಕ್ಷರು ಯುವವಾಹಿನಿ (ರಿ) ಮಾಣಿ ಘಟಕ) ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಭೆಯನ್ನು ಹಾಗೂ ಶಿರಾರ್ಥಿಗಳನ್ನು ಉದ್ದೇಶಿಸಿ ಇಂತಹ ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥೆ, ಸಂಘಗಳೇ ಮುಂದೊಂದು ದಿನ ಪರಿಸರದಲ್ಲಾಗುವ ಪ್ರಳಯ, ಭೂಕಂಪ ಮುಂತಾದವು ಸಂಭವಿಸಿದಾಗ ಮುಕ್ತ ಮನಸ್ಸಿನಲ್ಲಿ ಸಮಾಜ ಸೇವೆ ಜನರಕ್ಷಣೆಗೆ ಮುಂದೆ ನಿಲ್ಲುತ್ತದೆ ಎಂದು ಹೇಳಿದರು.

ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಮಾತನಾಡಿ, ಸಂಸ್ಥೆ ಬಗ್ಗೆ ಹಾಗೂ ಅವರ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಿಂದ ಆದ ಅನೇಕ ಬದಲಾವಣೆ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಡಾ.ಅಕ್ಷಯ್ ನಡುಬೈಲು ವ್ಯವಸ್ಥಾಪಕ ಟ್ರಸ್ಟಿ, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು ಮತ್ತು ಶಿಬಿರಾಧಿಕಾರಿಗಳು ವೇದಿಕೆಯಲ್ಲಿ ಉಪಸ್ತಿತರಿದ್ದರು.

ಪೆರ್ನೆ ಪರಿಸರದ ವಿವಿಧ ಕ್ಷೇತ್ರಗಳ ಸಾಧಕರ ಸೇವೆಯನ್ನು ಗುರುತಿಸಿ ಅಕ್ಷಯ ಸೇವಾ ಪುರಸ್ಕಾರವನ್ನು ನೀಡಲಾಯಿತು. ಈ ಸಾಧಕ ಪುರಸ್ಕಾರವನ್ನು ಪಡೆದಿರುವಂತ ಲೋಕಯ್ಯ ಶೇರ (ದೈವ ನರ್ತಕರು), ಪ್ರಹ್ಲಾದ್ ಶೆಟ್ಟಿ ಜೆ. ಹರೀಶ್ ಪೆರ್ಗಡೆ, ಮೋನಪ್ಪ ಗೌಡ, ಕಳೆಂಜ, ಡಾ.ಯಾಕೂಬ್ ಕಡಂಬು, ವಿದ್ಯಾಸನತ್ ಶೆಟ್ಟಿ, ಜಯಾನಂದ ಪೆರಾಜೆ, ವಿದ್ಯಾಧರ್ ಪೂಜಾರಿ (ನಿವೃತ್ತ ಸೈನಿಕರು), ರೋಹಿಣಿ ಬಿ. ಬಾಲಕೃಷ್ಣ ಸಾಲ್ಯಾನ್ ಅವರು ಈ ಗೌರವಕ್ಕೆ ಪಾತ್ರರಾದರು.

‘ಭೀಮ’ ತಂಡ ತಯಾರಿಸಿದ ‘ಶಿಬಿರವಾಣಿ’ ಯನ್ನು ಅಧ್ಯಕ್ಷರು ಸಭೆಯ ಮುಂದೆ ಅನಾವರಣಗೊಳಿಸಿದರು.

ಶಿಬಿರಾರ್ಥಿಗಳು ಪ್ರಾರ್ಥಿಸಿ, ಲಿಖಿತ ಸ್ವಾಗತಿಸಿದರು, ಕೃಪ ಕೆ. ಸನ್ಮಾನ ಪತ್ರವನ್ನು ವಾಚಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ವೀಕ್ಷಾ ನೆರವೇರಿಸಿದರು. ವೈಭವಿ ವಂದಿಸಿದರು.

ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಅಕ್ಷಯ ಕಲಾ ವೈಭವ – ‘ವಿಶ್ವ ಗುರು ಭಾರತ’ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮವು ನಡೆಯಿತು.

error: Content is protected !!
Scroll to Top