ಯಾದಗಿರಿ: ಸ್ವಯಂ ಘೋಷಿತ ದೇವ ಮಾನವ ಶಹಾಪುರದ ಮಲ್ಲಿಕಾರ್ಜುನ ಮುತ್ಯಾನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮಲ್ಲಿಕಾರ್ಜುನ್ ಓರ್ವ ಬಾಲಕಿಯರ ಜೊತೆ ಅಸಂಬದ್ಧ ಎಂಬಂತೆ ನಡೆದುಕೊಳ್ಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ತುಣುಕನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ದೂರು ದಾಖಲು ಮಾಡಿಕೊಂಡಿದೆ.
ಈ ವಿಡಿಯೋದ ತುಣುಕುಗಳನ್ನು ಪರಿಶೀಲನೆ ಮಾಡಿ, ಸೂಕ್ತ ಕ್ರಮದ ಬಗ್ಗೆ ಮರು ಟಪಾಲಿನಲ್ಲಿ ಮಾಹಿತಿ ಸಲ್ಲಿಸುವಂತೆ ಆಯೋಗ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ಪತ್ರದಲ್ಲಿ ವಿವರಿಸಿದ್ದಾರೆ.
























