ನವದೆಹಲಿ: ಇರಾನಿನ ಮೇಲೆ ಅಮೇರಿಕಾ ವೈಮಾನಿಕ ದಾಳಿ ಸಂಭವಿಸುವ ಸಾಧ್ಯತೆ ಇದ್ದು, ಆದಷ್ಟು ಬೇಗ ಇರಾನ್ ತೊರೆಯುವಂತೆ ಭಾರತೀಯರಿಗೆ ಭಾರತ ರಾಯಭಾರ ಕಚೇರಿ ಮುನ್ನೆಚ್ಚರಿಕೆ ನೀಡಿದೆ.
ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಸೇರಿದಂತೆ ಭಾರತೀಯ ಮೂಲದ ಎಲ್ಲರಿಗೂ ಸರ್ಕಾರ ಈ ಮುನ್ನೆಚ್ಚರಿಕೆ ನೀಡಿರುವುದಾಗಿದೆ. ಹಾಗೆಯೇ ಪ್ರತಿಭಟನೆಗಳು ನಡೆಯುವ ಸ್ಥಳಕ್ಕೆ ಹೋಗದಂತೆಯೂ ಸೂಚನೆ ನೀಡಲಾಗಿದೆ.
ಇರಾನ್‌ನಲ್ಲಿರುವವರು ತಮ್ಮ ಪಾಸ್‌ಪೋರ್ಟ್ ಮತ್ತು ಇತರೆ ಗುರುತಿನ ದಾಖಲೆಗಳನ್ನು ಸದಾ ಕೈಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ರಾಯಭಾರ ಕಚೇರಿಯ ದೂರವಾಣಿ ಸಂಖ್ಯೆಗಳು ಪ್ರಕಟಿಸಲಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ. ಭದ್ರತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಭಾರತೀಯರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
























