ಡ್ರಗ್ಸ್‌ ಜಾಲದ ದೊರೆ ಎಲ್‌ ಮೆಂಚೊನ್ನು ಹತ್ಯೆ ಮಾಡಿದ ಮೆಕ್ಸಿಕೊ ಸೇನೆ

ಜಗತ್ತಿನ ಅತಿ ಪ್ರಬಲ ಡ್ರಗ್ಸ್‌ ಜಾಲದ ಮುಖಂಡ ಎಲ್‌ ಮೆಂಚೊ

ಮೆಕ್ಸಿಕೊ: ಮೆಕ್ಸಿಕೊದ ಅತಿದೊಡ್ಡ ಮಾದಕವಸ್ತು ಜಾಲದ ದೊರೆ ನೆಮೆಸಿಯೊ ಎಲ್ ಮೆಂಚೊ ಒಸೆಗುರಾ ಎಂಬಾತನನ್ನು ಮೆಕ್ಸಿಕೊದ ಸೇನೆ ಹತ್ಯೆ ಮಾಡಿದೆ. ಆ ಬಳಿಕ ಮೆಕ್ಸಿಕೊ ನಗರದಲ್ಲಿ ಎಲ್‌ ಮೆಂಚೊನ ಗ್ಯಾಂಗಿನವರು ವ್ಯಾಪಕ ಹಿಂಚಾಚಾರ ಪ್ರಾರಂಭಿಸಿದ್ದು, ವಾಹನ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ.

ಜಲಿಸ್ಕೊ ​​ನ್ಯೂ ಜನರೇಷನ್ ಕಾರ್ಟೆಲ್‌ ಎಂಬ ಮಾದಕವಸ್ತು ಜಾಲದ ನಾಯಕ 59 ವರ್ಷದ ಎಲ್ ಮೆಂಚೊ ಜಲಿಸ್ಕೊ ​​ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾನೆ. ಘರ್ಷಣೆಯಲ್ಲಿ ಗಾಯಗೊಂಡ ಆತನನ್ನು ಮೆಕ್ಸಿಕೊ ನಗರಕ್ಕೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ ಎಂದು ಸೇನೆ ತಿಳಿಸಿದೆ. ಆತನ ತಲೆಗೆ 15 ದಶಲಕ್ಷ ಅಮೆರಿಕನ್‌ ಡಾಲರ್ ಬಹುಮಾನವಿತ್ತು.





















































 
 

ದಾಳಿಗೆ ಪ್ರತೀಕಾರವಾಗಿ ಬಂದೂಕುಧಾರಿಗಳು ಪಶ್ಚಿಮ ಜಲಿಸ್ಕೊ ​​ರಾಜ್ಯದಲ್ಲಿ 20ಕ್ಕೂ ಹೆಚ್ಚು ರಸ್ತೆಗಳನ್ನು ತಡೆದಿದ್ದರು. ಇದರಲ್ಲಿ ಟಪಲ್ಪಾ ಕೂಡ ಸೇರಿದೆ. ಕಾರುಗಳು ಮತ್ತು ಟ್ರಕ್‌ಗಳನ್ನು ಸುಟ್ಟುಹಾಕಲಾಗಿದ್ದು, ಹಿಂಸಾಚಾರವು ಇತರ ರಾಜ್ಯಗಳಿಗೂ ಹರಡಿದೆ. ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್, ನಾಗರಿಕರು ಶಾಂತವಾಗಿರಲು ಮನವಿ ಮಾಡಿದ್ದಾರೆ ಕೇಂದ್ರ ಸರ್ಕಾರವು ರಾಜ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

‘ಎಲ್ ಮೆಂಚೊ’ ಎಂದೇ ಕುಖ್ಯಾತಿ ಗಳಿಸಿದ್ದ ಒಸೆಗುರಾ, ಸಿನಾಲೋವಾ ಕಾರ್ಟೆಲ್‌ನ ಸ್ಥಾಪಕರಾದ ಜೋಕ್ವಿನ್ ‘ಎಲ್ ಚಾಪೊ’ ಗುಜ್ಮನ್ ಮತ್ತು ಇಸ್ಮಾಯಿಲ್ ಜಾಂಬಾಡಾ ಅವರನ್ನು ಸೆರೆಹಿಡಿದ ನಂತರ ಅತಿದೊಡ್ಡ ಮೆಕ್ಸಿಕನ್ ಡ್ರಗ್ ಲಾರ್ಡ್‌ಗಳಲ್ಲಿ ಒಬ್ಬನಾಗಿದ್ದ. ಜೋಕ್ವಿನ್‌ ಮತ್ತು ಇಸ್ಮಾಯಿಲ್ ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.‌

error: Content is protected !!
Scroll to Top