ಮೂವರು ಅಪ್ರಾಪ್ತ ಬಾಲಕಿಯರಿಗೆ ‌ಲೈಂಗಿಕ ಕಿರುಕುಳ ನೀಡಿದ ಕಾಮುಕ ವೃದ್ಧ ಅರೆಸ್ಟ್

ಬೆಂಗಳೂರು: ಮೂವರು ಅಪ್ರಾಪ್ತೆಯರಿಗೆ ಸಿಹಿ ತಿನಿಸಿನ ಆಸೆ ಹುಟ್ಟಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಿ 64 ವರ್ಷದ ವೃದ್ಧನನ್ನು ಅನೇಕಲ್ ಪೊಲೀಸರು ಬಂಧಿಸಿದ್ದಾರೆ.

ಮಕ್ಕಳನ್ನು ಬೆಳಗ್ಗೆ ಸುಮಾರು 8.30 ರ ಹೊತ್ತಿಗೆ ಪೋಷಕರು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಶಾಲೆ ಆರಂಭ ಹತ್ತು ಗಂಟೆಗೆ ಆಗುತ್ತಿದ್ದರೂ ಸುಮಾರು ಎರಡು ಗಂಟೆಗಳಿಗೂ ಮೊದಲೇ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಕಾಮುಕ ‌ವೃದ್ಧ ಗಮನಿಸಿದ್ದ. ಆ ಬಳಿಕ ಮಕ್ಕಳಿಗೆ ಚಾಕಲೇಟ್ ನೀಡುವುದಾಗಿ ಆಸೆ ಹುಟ್ಟಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಎರಡನೇ ತರಗತಿಯ ಬಾಲಕಿಗೆ ವೃದ್ಧ ಲೈಂಗಿಕ ಶೋಷಣೆ ಮಾಡಿದ್ದು, ಅದನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಈ ಘಟನೆಯ ವಿಚಾರಣೆ ಮಾಡಿದ ವೇಳೆ ಮೂವರು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.





















































 
 

error: Content is protected !!
Scroll to Top