ರಾಮನಗರ: ಪತ್ನಿಯ ಮೇಲಿನ ಸಂದೇಹದಿಂದ ಆಕೆಯನ್ನು ಪತಿಯೇ ಹತ್ಯೆಗೈದಿರುವ ಘಟನೆ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳೇಗೌಡನಪಾಳ್ಯದಲ್ಲಿ ನಡೆದಿದೆ.
ಸಿಂಚನಾ (21) ಎಂಬ ಮಹಿಳೆ ಮೃತ ದುರ್ದೈವಿ. ಆಕೆಯ ಗಂಡ ರೇಣುಕಯ್ಯ ಎಂಬಾತನೇ ಆರೋಪಿ.
ಕೌಟುಂಬಿಕ ಕಲಹ, ಪತ್ನಿಯ ಮೇಲಿನ ಅನೈತಿಕ ಸಂಬಂಧದ ಸಂಶಯದಿಂದ ರೇಣುಕಯ್ಯ ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಂದಿದ್ದಾನೆ. ಪ್ರತಿ ನಿತ್ಯ ಪತ್ನಿಯ ಜೊತೆ ಜಗಳವಾಡುತ್ತಿದ್ದ ರೇಣುಕಯ್ಯ ಕೊಲೆ ಮಾಡಿದ ದಿನವೂ ಆಕೆಯ ಜೊತೆ ಜಗಳವಾಡಿದ್ದು, ಬಳಿಕ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
























