ಲಖನೌ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಲ್ಲು ತೂರಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಹಾರ್ದೋಯ್ ಸಮೀಪ ನಡೆದಿದೆ.
ಲಖನೌ-ದೆಹಲಿ ವಂದೇ ಭಾರತ್ನಲ್ಲಿ ಭಾಗವತ್ ಮೀರತ್ಗೆ ಹಿಂತಿರುಗುತ್ತಿದ್ದರು. ಈ ವೇಳೆ ಹಾರ್ದೋಯ್ ಗ್ರಾಮದಲ್ಲಿ ಕಲ್ಲು ತೂರಾಟವಾಗಿದೆ. ಗುರುವಾರ ಮಧ್ಯಾಹ್ನ 3:30ರ ವೇಳೆಗೆ ಘಟನೆಯಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಮೀರತ್ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆಯಲ್ಲಿ ಮೋಹನ್ ಭಾಗವತ್ ಅವರು ಇಳಿದಿದ್ದಾರೆ. ಇಂದು ಮತ್ತು ನಾಳೆ 2 ದಿನಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ರೀಡಾಪಟುಗಳು ಮತ್ತು ಬುದ್ಧಿಜೀವಿಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
ಕಲ್ಲು ಹೊಡೆದ ಬಗ್ಗೆ ರೈಲ್ವೆ ಪೊಲೀಸ್ ವಿಶೇಷ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಭಾಗವತ್ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಅವರು ರಾತ್ರಿ 9 ಗಂಟೆ ಸುಮಾರಿಗೆ ಮೀರತ್ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆಯಲ್ಲಿ ಇಳಿದು ಅವರು ತಂಗಿರುವ ಶತಾಬ್ದಿ ನಗರದ ಮಾಧವ್ ಕುಂಜ್ಗೆ ತೆರಳಿದರು.
























